fbpx
ಸಮಾಚಾರ

“ನನ್ನದೇನೂ ತಪ್ಪಿಲ್ಲ, ಯಾವ ಹುಡುಗನಿಗೂ ನಾನು ಹೊಡೆದಿಲ್ಲ” ಹಲ್ಲೆ ಆರೋಪ ತಳ್ಳಿಹಾಕಿದ ಪ್ರವೀಣ್ ಕುಮಾರ್

ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ತನ್ನ ಏಳು ವರ್ಷದ ಮಗನನ್ನು ಹೊಡೆದು ತಳ್ಳುವುದಲ್ಲದೆ ತನ್ನ ಮೇಲೆ ಹಲ್ಲೆ ನಡೆದ್ದಾಗಿ ಉತ್ತರ ಪ್ರದೇಶದ ಮೀರತ್ ನ ನಿವಾಸಿಯೊಬ್ಬ ದೂರಿದ್ದಾರೆ.

“ಇಬ್ಬರೂ ನೆರೆಹೊರೆಯವರು ಮತ್ತು ಅವರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಹೇಳಿಕೆಗಳ ಆಧಾರದ ಮೇಲೆ ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವೈದ್ಯಕೀಯ ದಾಖಲೆಗಳನ್ನು ಸಹ ಪರಿಗಣಿಸಲಾಗುತ್ತದೆ” ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಖಿಲೇಶ್ ನಾರಾಯಣ್ ಹೇಳಿದ್ದಾರೆ.

ಉತ್ತರ ಪ್ರದೇಶದ ಮೀರತ್‍ನಲ್ಲಿ ವಾಸಿಸುತ್ತಿರುವ ಪ್ರವೀಣ್ ಕುಮಾರ್ ಅವರ ಮೇಲೆ ನೆರೆಮನೆಯ ನಿವಾಸಿ ದೀಪಕ್ ಶರ್ಮಾ ಗಂಭೀರ ಆರೋಪವನ್ನು ಮಾಡಿದ್ದು, ಕುಡಿದ ಮತ್ತಿನಲ್ಲಿ ಪ್ರವೀಣ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಈ ಘಟನೆ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದು, ಪ್ರಕರಣ ಕುರಿತು ಸ್ಥಳೀಯ ಎಸ್‍ಪಿ ವಿಚಾರಣೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

“ನಾನು ಮಧ್ಯಾಹ್ನ 3: 00 ಕ್ಕೆ ಬಸ್ ನಿಲ್ದಾಣದಲ್ಲಿ ನನ್ನ ಮಗನಿಗಾಗಿ ಕಾಯುತ್ತಿದ್ದೆ. ಕುಮಾರ್ ಸ್ಥಳಕ್ಕೆ ಬಂದು, ತನ್ನ ಕಾರಿನಿಂದ ಹೊರಬಂದು ಮೊದಲು ಬಸ್ ಚಾಲಕನನ್ನು ನಿಂದಿಸಿದನು ಮತ್ತು ನಂತರ ನನ್ನನ್ನು ನಿಂದಿಸಿದನು. ಅವನು ಮದ್ಯಪಾನ ಮಾಡಿದ್ದವರಂತೆ ಕಾಣುತ್ತಿದ್ದರು. ನನ್ನ ಮೇಲೆ ಅವರು ಹಲ್ಲೆ ನಡೆಸಿದ್ದಾರೆ ಹಾಗೆಯೇ ಕೈ ಮುರಿದಿದ್ದಾರೆ.” ಎಂದು ದೀಪಕ್ ಶರ್ಮಾ ಹೇಳಿದ್ದಾರೆ.

“ನನ್ನ ಮಗನನ್ನೂ ಸಹ ಪ್ರವೀಣ್ ತಳ್ಳಿದ್ದಾರೆ. ಆದರೆ ಪೋಲೀಸರಿಗೆ ಈ ಬಗ್ಗೆ ದೂರು ಕೊಡಲು ಹೋದಾಗ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನು ಈ ಸಂಬಂಧ ನನಗೆ ಜೀವ ಬೆದರಿಕೆಗಳು ಬರಲಾರಂಭಿಸಿದೆ” ಎಂದು ದೀಪಕ್ ಶರ್ಮಾ ಹೇಳಿದ್ದಾರೆ.

ಮೀರತ್‌ನ ಟಿಪಿ ಪೊಲೀಸ್ ಸ್ಟೇಷನ್‌ನಲ್ಲಿ ದಾಖಲಾಗಿರುವ ಈ ದೂರನ್ನು ಕ್ರಿಕೆಟಿಗ ಪ್ರವೀಣ್ ನಿರಾಕರಿಸಿದ್ದಾರೆ. ‘ಈ ಇಲ್ಲಿ ತಪ್ಪಾಗಿ ದೂರು ನೀಡಲಾಗಿದೆ. ನಾನು ಬಾಲಕನನ್ನು ದೂಡಿಲ್ಲ. ಬದಲಾಗಿ ಆ ಮನುಷ್ಯನೆ (ಶರ್ಮಾ) ನನ್ನ ಕುತ್ತಿಗೆಯಿಂದ ಚೈನ್ ಎಳೆದರು, ನನ್ನ ಮುಖಕ್ಕೆ ಗುದ್ದಿದರು,’ ಎಂದು ಪ್ರವೀಣ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top