fbpx
ಸಮಾಚಾರ

ವೃದ್ಧೆಗೆ 20 ಲಕ್ಷ ರೂ ವಂಚನೆ ಆರೋಪ; ಸ್ಯಾಂಡಲ್ ವುಡ್ ನಿರ್ದೇಶಕನ ವಿರುದ್ಧ ಪೊಲೀಸ್ ಕೇಸ್!

‘ಆರೆಂಜ್’, ‘ಲವ್ ಗುರು’ ಖ್ಯಾತಿಯ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪ್ರಶಾಂತ್​ ರಾಜ್​ ಮತ್ತು ನಿರ್ಮಾಪಕ ನವೀನ್​ ರಾಜ್​ ವೃದ್ಧೆಯೊಬ್ಬರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ದೂರದ ಸಂಬಂಧಿ ಗಿರಿಜಾ ಮತ್ತು ಚಿಕ್ಕ ವೀರಯ್ಯ ಎಂಬವರ ಮಗ ಕೇಸ್‍ ಒಂದರಲ್ಲಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದನು. ಈ ವಿಚಾರ ತಿಳಿದ ನಿರ್ದೇಶಕ ಪ್ರಶಾಂತ್ ರಾಜ್ ಸಹೋದರ ನವೀನ್ ರಾಜ್, ಮಾವ ನಾಗರಾಜ್ ಚಿಕ್ಕವೀರಯ್ಯನ ಮನೆಗೆ ಹೋಗಿದ್ದರು. 20 ಲಕ್ಷ ಹಣ ನೀಡಿದ್ದರೆ ನಿನ್ನ ಮಗನನ್ನು ಪೊಲೀಸರಿಂದ ಬಿಡಿಸಿಕೊಂಡು ಬರುವುದಾಗಿ ಹೇಳಿದ್ದರು.

ಪ್ರಶಾಂತ್ ಮಾತು ನಂಬಿದ ದಂಪತಿ ಮೊದಲಿಗೆ 10 ಲಕ್ಷ ರೂ., 600 ಗ್ರಾಂ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದರು. ಇದಾದ ಕೆಲದಿನಗಳ ನಂತರ ಮತ್ತೆ ಮನೆಗೆ ಬಂದ ಪ್ರಶಾಂತ್ ರಾಜ್ ಇನ್ನೂ 15 ಲಕ್ಷ ರೂ. ಬೇಕು ಕೊಡಿ ಎಂದು ಕೇಳಿದ್ದಾನೆ. ಇದರಿಂದ ಬೇಸತ್ತ ದಂಪತಿ ನಮ್ಮ ಹಣ ವಾಪಸ್ಸು ಕೊಡುವಂತೆ ಒತ್ತಾಯ ಮಾಡಿದ್ದಾರೆ. ದಂಪತಿಯ ಮಾತಿನಿಂದ ಕೋಪಗೊಂಡ ನಿರ್ದೇಶಕ ಪ್ರಶಾಂತ್ ನಿಮ್ಮ ಮನೆ ಮೇಲೆ ಇಡಿ, ಐಟಿ ದಾಳಿ ಮಾಡಿಸ್ತೀನಿ. 15 ಲಕ್ಷ ರೂ. ಕೊಡದಿದ್ದರೆ ನಿಮ್ಮನ್ನು ಕೊಲೆ ಮಾಡಿಸ್ತೀನಿ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಕೊನೆಗೆ ದಾರಿ ಕಾಣದ ದಂಪತಿಗಳು ಹೆಚ್ಎ‌ಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಾಗೂ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆ ನಿರ್ದೇಶಕ ಪ್ರಶಾಂತ್ ರಾಜ್, ಸಹೋದರ ನವೀನ್ ರಾಜ್, ಮಾವ ನಾಗರಾಜ್ ಪರಾರಿಯಾಗಿದ್ದಾರೆ. ಪೊಲೀಸರು ಪರಾರಿಯಾಗಿರುವ ಈ ಮೂವರು ಹುಡುಕಾಟಕ್ಕೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ ನಿರ್ದೇಶಕ ಪ್ರಶಾಂತ್​ ರಾಜ್​ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ಗಿರಿಜಮ್ಮ ಪುತ್ರನ ವಿರುದ್ಧ ಮೋಸ, ವಂಚನೆಗಳ ಹಲವು ಪ್ರಕರಣಗಳಿವೆ. ಆ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಗಿರಿಜಮ್ಮ ನನ್ನ ಸ್ವಂತ ಅತ್ತೆ. ನನಗೆ ಬ್ಯಾಗ್​ ಕೊಟ್ಟಿದ್ದು ನಿಜ. ಆದರೆ ಅದನ್ನೇ 20 ಲಕ್ಷ ಕೊಟ್ಟಿದ್ದು ಅನ್ನೋ ರೀತಿಯಲ್ಲಿ ಬಿಂಬಿಸಿದ್ದಾರೆ. ನಾನು ಆ ಬ್ಯಾಗ್​ನ್ನು ಅವರಿಗೆ ವಾಪಸ್​ ನೀಡಿದ್ದೇನೆ. ಅದರ ಸಿಸಿಟಿವಿ ಫುಟೇಜ್​ ನನ್ನ ಬಳಿಯೂ ಇದೆ. ಸದ್ಯ ನಾನು ನನ್ನ ಹೊಸ ಚಿತ್ರಕ್ಕಾಗಿ ಕಳೆದ 15 ದಿನಗಳಿಂದ ಲೊಕೇಷನ್​ ಹುಡುಕಾಟದಲ್ಲಿ ತೊಡಗಿದ್ದೇನೆ. ಕೆಲ ದಿನಗಳಲ್ಲೇ ವಾಪಸ್ಸಾಗಿ ಎಲ್ಲ ಆರೋಪಗಳಿಗೂ ಸ್ಪಷ್ಟನೆ ನೀಡುತ್ತೇನೆ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top