fbpx
ಸಮಾಚಾರ

ಮೊದಲ ಏಕದಿನ ಪಂದ್ಯ: ಇಡೀ ವೆಸ್ಟ್ ಇಂಡೀಸ್ ತಂಡಕ್ಕೆ ದಂಡ!

ಭಾನುವಾರ ನಡೆದಿದ್ದ ಭಾರತ ವಿರುದ್ಧ ಏಕದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದ ವೆಸ್ಟ್‌ ಇಂಡೀಸ್ ತಂಡಕ್ಕೆ ಐಸಿಸಿ ದಂಡ ವಿಧಿಸಿದೆ. ಮೊದಲ ಇನಿಂಗ್ಸ್‌‌ನಲ್ಲಿ ವೆಸ್ಟ್‌ ಇಂಡೀಸ್ ತಂಡ ನಾಲ್ಕು ಓವರ್‌ಗಳು ನಿಧಾನಗತಿಯಿಂದ ಕೂಡಿದ್ದವು. ಹಾಗಾಗಿ, ಐಸಿಸಿ ಎಲೈಟ್ ಪ್ಯಾನೆಲ್ ಪಂದ್ಯ ರೆಫರಿ ಡೇವಿಡ್ ಬೂನ್ ಅವರು ವೆಸ್ಟ್ ಇಂಡೀಸ್ ತಂಡಕ್ಕೆ ದಂಡ ವಿಧಿಸಿದ್ದಾರೆ.

ವೆಸ್ಟ್ ಇಂಡೀಸ್ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಐಸಿಸಿ ನಿಯಮ 2.22 ಉಲ್ಲಂಸಿದಂತಾಗಿದೆ. ಪಂದ್ಯದ ಪ್ರತಿಯೊಂದು ಓವರ್ ಕೂಡ ನಿಧಾನಗತಿಯಲ್ಲಿ ಬೌಲಿಂಗ್ ಮಾಡಲಾಗಿದೆ. ಹಾಗಾಗಿ, ಆಟಗಾರರಿಗೆ ಪಂದ್ಯದ ಶುಲ್ಕದಲ್ಲಿ ಶೇ. 20 ರಷ್ಟು ಸೇರಿದಂತೆ ಒಟ್ಟಾರೆ ತಂಡಕ್ಕೆ ಶೇ. 80 ರಷ್ಟು ದಂಡ ವಿಧಿಸಲಾಗಿದೆ.

ನಿಧಾನಗತಿಯಲ್ಲಿ ಬೌಲಿಂಗ್ ಮಾಡಿರುವುದನ್ನು ಪಂದ್ಯ ಮುಗಿದ ಬಳಿಕ ಕಿರೋನ್ ಪೊಲಾರ್ಡ್ ಒಪ್ಪಿಕೊಂಡಿದ್ದು ವಿಚಾರಣೆ ಮಾಡುವ ಅಗತ್ಯವಿಲ್ಲ ಎನ್ನಲಾಗಿದೆ. ಆನ್ ಪೀಲ್ಡ್‌ ಅಂಪೈರ್‌ಗಳಾದ ನಿತಿನ್ ಮೆನನ್ ಹಾಗೂ ಶಾನ್ ಜಾರ್ಜ್, ಮೂರನೇ ಅಂಪೈರ್ ರೊಡ್ನಿ ಟಕ್ಕರ್ ಹಾಗೂ ನಾಲ್ಕನೇ ಅಂಪೈರ್ ಅನಿಲ್ ಚೌಧರಿ ಅವರು ಕಿರಾನ್ ಪೊಲಾರ್ಡ್ ಪಡೆಯ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top