fbpx
ಸಮಾಚಾರ

ಎಸ್ಎಂ ಕೃಷ್ಣಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಪರಾಜಿತ ಕೈ ಅಭ್ಯರ್ಥಿ ವಿರುದ್ಧ ಕೇಸ್ ದಾಖಲು

ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ ಅಂಜನಪ್ಪ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅಂಜನಪ್ಪ ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ವಿರುದ್ಧ ಅವಾಚ್ಯ ಪದ ಬಳಸಿ ಹರಿಹಾಯ್ದಿದ್ದರು. ಹೀಗಾಗಿ ಎಸ್ ಎಂ ಕೃಷ್ಣ ಅಭಿಮಾನಿ ಅಂತ ಹೇಳಲಾಗುತ್ತಿರುವ ಶಂಕರಪ್ಪ ಅವರು ಅಂಜನಪ್ಪ ವಿರುದ್ಧ ದೂರು ನೀಡಿದ್ದು ಐಪಿಸಿ ಸೆಕ್ಷನ್ 153(ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಪ್ರಚೋದನೆ), 504(ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು) ಅಡಿ ಪ್ರಕರಣ ದಾಖಲಾಗಿದೆ.

ಅಂಜನಪ್ಪ ವಾಗ್ದಾಳಿ:
‘ಕಾಂಗ್ರೆಸ್‌ಗೆ ಹೇಗೆ ದ್ರೋಹ ಮಾಡಬೇಕು ಎಂದು ಕಾಂಗ್ರೆಸ್ ಶಾಸಕರಿಗೆ ಕಲಿಸಿದ ಎಸ್‌.ಎಂ.ಕೃಷ್ಣ ಅವರಂತಹ ವಂಚಕರಿಗೆ ಮಣೆ ಹಾಕಿದ ಕಾರಣಕ್ಕೆ ಕಾಂಗ್ರೆಸ್‌ ಇವತ್ತು ಇಂತಹ ಸ್ಥಿತಿ ಬಂದಿದೆ’ ಎಂದು ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಎಂ.ಅಂಜನಪ್ಪ ಅವರು ವಾಗ್ದಾಳಿ ನಡೆಸಿದ್ದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏನು ಗತಿ ಇಲ್ಲದವರನ್ನು ತಂದು ಕಾಂಗ್ರೆಸ್‌ ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯಪಾಲರನ್ನಾಗಿ ಮಾಡಿತು. ಮೂರು ಕಾಸಿನ ಯೋಗ್ಯತೆ ಇಲ್ಲದವರು 86 ವಯಸ್ಸಿನಲ್ಲಿ ಪಕ್ಷಕ್ಕೆ ದ್ರೋಹ ಮಾಡಿ ಹೋದರು. ತಾಯಿಗೆ ಮೋಸ ಮಾಡುವ ಇಂತಹವರಿಂದಲೇ ಪಕ್ಷಕ್ಕೆ ಹಾನಿಯಾಗಿದೆ’ ಎಂದು ಆರೋಪಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top