fbpx
ಸಮಾಚಾರ

ತಮ್ಮ ಮಗಳು ನಟಿ ರಶ್ಮಿಕಾ ವಿರುದ್ಧ ಬೇಸರ ಹೊರಹಾಕಿದ ತಂದೆ!

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣದಿಂದಾಗಿ ರಶ್ಮಿಕಾ ಅವರಿಗೆ ತಮ್ಮ ಕುಟುಂಬಸ್ಥರ ಜೊತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮನೆಯ ಕಡೆಗೂ ಗಮನ ಕೊಡು ಮಗಳೇ ಎಂದು ರಶ್ಮಿಕಾ ಅವರ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.

‘ರಶ್ಮಿಕಾ ಈ ವರ್ಷ ಎಷ್ಟು ಬಿಝಿ ಇದ್ದಾರೆ ಎಂದರೆ, ಶನಿವಾರದಂದು ಪೊಗರು ಶೂಟಿಂಗ್‌ನಲ್ಲಿದ್ದರು. ಭಾನುವಾರ ಚೆನ್ನೈಗೆ ಹೋದರು, ಸೋಮವಾರ ಹೈದ್ರಾಬಾದ್‌ಗೆ ಹೋಗಿದ್ದಾರೆ. ಹೀಗೆ ದಿನಕ್ಕೊಂದು ರಾಜ್ಯವನ್ನು ಸುತ್ತುತ್ತಿದ್ದಾರೆ. ಇಷ್ಟು ಬಿಝಿ ಇರುವುದು ನೋಡಿ ಅವರ ತಂದೆ, ‘ಮಗಳೇ ನನಗೆ ನೀನೇ ಹಿರಿಯ ಪುತ್ರಿ, ಮನೆಯ ಕಡೆಗೂ ಗಮನ ಕೊಡು’ ಎಂದು ಹೇಳಿದ್ದಾರೆ.

ಈ ಬಗ್ಗೆ ರಶ್ಮಿಕಾ ಅವರ ತಾಯಿ ಪ್ರತಿಕ್ರಿಯಿಸಿ, ನಾನು ಯಾವಾಗಲೂ ರಶ್ಮಿಕಾ ಜೊತೆಯಲ್ಲೇ ಇರುತ್ತೇನೆ. ಆದರೆ ಆಕೆಯ ತಂದೆ ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ರಶ್ಮಿಕಾ ಅನೇಕ ಚಿತ್ರಗಳಲ್ಲಿ ನಟಿಸುತ್ತಿರುವುದನ್ನು ನೋಡಿ ನಾನೇ ಆಶ್ಚರ್ಯ ಪಡುತ್ತಿದ್ದೇನೆ. ರಶ್ಮಿಕಾ ನಟಿಸಿದ ಎಲ್ಲಾ ಚಿತ್ರಗಳು ಮುಂದಿನ ವರ್ಷ ಬಿಡುಗಡೆ ಆಗಲಿದೆ. ಹೀಗಾಗಿ ಆ ವರ್ಷ ಅವಳಿಗೆ ತುಂಬಾ ಮುಖ್ಯ. ದೇವರ ಆಶೀರ್ವಾದದಿಂದ ಅವಳಿಗೆ ಉತ್ತಮ ಪಾತ್ರಗಳು ಸಿಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top