fbpx
ಸಮಾಚಾರ

ರಜಿನಿಕಾಂತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಧ್ವನಿಯೆತ್ತಿದ ವಿಚಾರಗಳೇ ಹೆಚ್ಚು ರಾರಾಜಿಸುತ್ತಿದೆ. ಕೆಲ ದಿನಗಳ ಹಿಂದೆ ನನಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ ಎಂದಿದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆನಂತರದ ದಿನಗಳಲ್ಲಿ ಟ್ರಾಲ್ ವಿಚಾರವಾಗಿ ರಶ್ಮಿಕಾ ಸುದ್ದಿಯಾಗಿದ್ದರು. ಈ ನಡುವೆ ಮಹೇಶ್​ ಬಾಬು ಹೊಗಳಲು ಹೋಗಿ ರಶ್ಮಿಕಾ ಮತ್ತೆ ವಿವಾದ ಸೃಷ್ಟಿಸಿದ್ದಾರೆ.

ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ‘ಸರಿಲೇರು ನೀಕೆವರು’ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ರಶ್ಮಿಕಾ ಸಂದರ್ಶನವೊಂದರಲ್ಲಿ ಮಹೆಶ್​ ಬಾಬು ಅವರನ್ನು ಹೊಗಳಿದ್ದಾರೆ. ಆದರೆ ಮಹೇಶ್​ ಬಾಬು ಅವರನ್ನು ಹೊಗಳಲಿ ಹೋಗಿ ರಜಿನಿಕಾಂತ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗುವಂತೆ ವಿವಾದ ಸೃಷ್ಟಿಸಿದ್ದಾರೆ!

ಸಂದರ್ಶನದಲ್ಲಿ ಮಾತನಾಡುವಾಗ ರಶ್ಮಿಕಾ ಮಹೇಶ್ ಬಾಬು ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಾ, “ಸೆಟ್​ನಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದುನ್ನು ಮಹೇಶ್ ಬಾಬು ಅವರಿಂದ ನೋಡಿ ಕಲಿತೆ. ಇಷ್ಟು ದೊಡ್ಡ ಸ್ಟಾರ್​ ಜೊತೆ ನಟಿಸುವಾಗ ಹಾಗೂ ಡಾನ್ಸ್​ ಮಾಡುವಾಗ ನನಗೆ ತುಂಬಾನೇ ತೊಂದರೆ ಆಗುತ್ತಿತ್ತು. ಆದರೆ, ಇದನ್ನು ಅವರು ಅದನ್ನು ಹೋಗಲಾಡಿಸಿದರು. ಮಹೇಶ್​ ಬಾಬು ನಿಜವಾದ ಸೂಪರ್​ ಸ್ಟಾರ್​” ಎಂದು ರಶ್ಮಿಕಾ ಹೇಳಿದ್ದಾರೆ.

ರಶ್ಮಿಕಾ ಮಹೇಶ್ ಬಾಬು ಅವರನ್ನು ನಿಜವಾದ ಸೂಪರ್​ಸ್ಟಾರ್ ಎಂದು ಹೇಳಿರುವುದು ಅತ್ತ ರಜಿನಿಕಾಂತ್ ಅಭಿಮಾನಿಗಳಿಗೆ ಕೋಪ ತರಿಸಿದೆ.. ಯಾಕೆಂದರೆ​ ಸೂಪರ್ ಸ್ಟಾರ್ ಬಿರುದನ್ನು ರಜನಿಕಾಂತ್​ಗೆ ನೀಡಲಾಗಿದೆ. ರಜನಿ ಅಭಿಮಾನಿಗಳಷ್ಟೇ ಏಕೆ ಇಡೀ ಚಿತ್ರರಂಗ ಅವರನ್ನು ಪ್ರೀತಿಯಿಂದ ಸೂಪರ್​ ಸ್ಟಾರ್​ ಎನ್ನುತ್ತಾರೆ.

ಹೀಗಿರುವಾಗ, ‘ಮಹೇಶ್​ ಬಾಬು ನಿಜವಾದ ಸೂಪರ್​​ಸ್ಟಾರ್”​ ಎಂದು ರಶ್ಮಿಕಾ ಹೇಳಿಕೆ ನೀಡಿರುವುದು ಸರಿಯೇ? ಎಂದು ರಜಿನಿ ಅಭಿಮಾನಿಗಳು ರಶ್ಮಿಕಾ ರನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ರಶ್ಮಿಕಾ ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top