Warning: Use of undefined constant _COOKIE - assumed '_COOKIE' (this will throw an Error in a future version of PHP) in /home/bhavyar4/public_html/hallikatte.com/wp-content/themes/flex-mag/admin/admin-interface.php on line 596

Warning: Cannot modify header information - headers already sent by (output started at /home/bhavyar4/public_html/hallikatte.com/wp-content/themes/flex-mag/admin/admin-interface.php:596) in /home/bhavyar4/public_html/hallikatte.com/wp-content/plugins/sg-cachepress/core/Supercacher/Supercacher_Helper.php on line 77
“ಸಾಯೋವರೆಗೂ ನಾನೂ ಸಿದ್ದರಾಮಯ್ಯ ಸ್ನೇಹಿತರಾಗಿರುತ್ತೇವೆ” ಈಶ್ವರಪ್ಪ! – Halli Katte
ಸಮಾಚಾರ

“ಸಾಯೋವರೆಗೂ ನಾನೂ ಸಿದ್ದರಾಮಯ್ಯ ಸ್ನೇಹಿತರಾಗಿರುತ್ತೇವೆ” ಈಶ್ವರಪ್ಪ!

ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯದ ಕುರಿತು ವಿಚಾರಿಸಿದರು. ಸಚಿವ ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಭೇಟಿ ವೇಳೆ ಹಾಜರಿದ್ದರು.

ಭೇಟಿ ವೇಳೆ ಸಚಿವ ಕೆ.ಎಸ್​ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲೆಳೆದಿದ್ಧಾರೆ. ‘ನಿಮಗೂ ಹಾರ್ಟ್​​ ಇರೋದು ಗ್ಯಾರಂಟಿ ಆಯ್ತು,’ ಎಂದು ಈಶ್ವರಪ್ಪ ನಗೆಚಟಾಕಿ ಹಾರಿಸಿದ್ದಾರೆ. ಅಷ್ಟೇ ಹಸನ್ಮುಖವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ “ನೀನೇನು ಇಲ್ಲಾ ಅಂದ್ಕೋಡಿದ್ಯಾ..?” ಎಂದು ಮರು ಪ್ರಶ್ನೆ ಹಾಕಿದರು. “ನಾನೆಲ್ಲಿ ಹಾಗಂತ ಬಾಯಿ ಬಿಟ್ಟು ಹೇಳಿದೆ” ಎಂದು ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು.

ಈಶ್ವರಪ್ಪ ಮಾತಿಗೆ ನಗೆ ಬೀರಿದ ಸಿದ್ದರಾಮಯ್ಯ “ನೀನು ಹ್ಯೂಮನ್‌ ಅನಾಟಮಿ ಓದ್ಕೊಂಡಿದ್ದಿಯೋ…!” ಎಂದು ಪ್ರಶ್ನಿಸಿದರು. ಇಬ್ಬರ ಈ ಸ್ವಾರಸ್ಯದ ಸಂಭಾಷಣೆಗೆ ಸಿಎಂ, ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸೇರಿ ಅಲ್ಲಿದ್ದವರೆಲ್ಲರೂ ಮನಸ್ಪೂರ್ತಿಯಾಗಿ ನಕ್ಕಿದ್ದರು.

‘ಹೊರಗಡೆ ನಾವೆಷ್ಟೇ ಬಡಿದಾಡಿಕೊಂಡರೂ, ನಮ್ಮ ಜಗಳವನ್ನು ವಿಧಾನಸಭೆಯಲ್ಲಿ ನೋಡಿದವರು ಇವರು ಸಾಯೋವರೆಗೂ ಮಾತೇ ಆಡೊಲ್ಲ ಎಂದುಕೊಳ್ಳುತ್ತಾರೆ. ಹಾಗೆ ಅಂದುಕೊಳ್ಳೋರು ದಡ್ಡರು. ನಾವಿಬ್ಬರು ಬುದ್ಧಿವಂತರು. ನಾವು ಬಹಳ ಸ್ನೇಹದಲ್ಲಿ ಇರುತ್ತೇವೆ. ಎಂದಿಗೂ ನಮ್ಮ, ಅವರ ಸ್ನೇಹ ಎಲ್ಲಿಯೂ ವ್ಯತ್ಯಾಸ ಆಗಲು ಸಾಧ್ಯವಿಲ್ಲ. ಸಾಯುವವರೆಗೂ ಸ್ನೇಹದಲ್ಲಿ ಇರುತ್ತೇವೆ.

ನನ್ನ ಪಕ್ಷದ ಬಗ್ಗೆ ಅವರೇನಾದರೂ ಹೇಳಿದರೆ ನಾನು ಸುಮ್ಮನಿರಲ್ಲ. ಅವರ ಪಕ್ಷದ ಬಗ್ಗೆ ನಾನೇನಾದರೂ ಹೇಳಿದರೂ ಅವರು ಸುಮ್ಮನಿರಲ್ಲ. ಆದರೆ ನಮ್ಮಿಬ್ಬರ ನಡುವೆ ಮಾನವೀಯ ಸಂಬಂಧಗಳಿವೆ. ನಾವು ಕಿತ್ತಾಡೋದನ್ನ ನೋಡಿದರೆ ಈ ಜನ್ಮದಲ್ಲಿ ಇವರು ಮುಖ ನೋಡಲ್ಲ ಅನ್ಕೊಳ್ಳೋರು. ಆದರೆ ಅವರು ಸಿಎಂ ಆಗಿದ್ದಾಗ ಊಟಕ್ಕೆ ಅವರ ಪಕ್ಕದಲ್ಲೇ ಆಸನ ಹಾಕಿಸಿ ಕಾಯುತ್ತಿದ್ದರು ಎಂದು ಹಳೆಯ ದಿನಗಳನ್ನು ಸ್ಮರಿಸಿದರು.

ಒಮ್ಮೆ ಸದನದಲ್ಲಿ ಮಾತಿನ ಚಕಮಕಿ ಆಗಿತ್ತು. ಸಭಾಪತಿ ಶಂಕರಮೂರ್ತಿ ಅವರ ಕೊಠಡಿಯಲ್ಲಿ ಕುಳಿತಿದ್ದೆ. ಸಿದ್ದರಾಮಯ್ಯ ಸಿಎಂ ಆಗಿದ್ದರು.‌ ಅವರು ಅಲ್ಲಿಗೆ ಬಂದರು, ನಾನು ಹೊರಡಲು ರೆಡಿಯಾದೆ. ಈಶ್ಚರಪ್ಪ ಕುಳಿತುಕೊಳ್ಳಿ ಎಲ್ಲಿಗೆ ಹೋಗ್ತಿದ್ದೀರಿ ಅಂತಾ ಹೇಳ್ತಾನೆ ಕುಳಿತು ಟೀ ಕುಡಿದೆವು ಎಂದು ನಕ್ಕರು.

ನಾನು ಡಿಸಿಎಂ ಇರಬೇಕಾದರೆ ಅವರ ಒಂದಿಷ್ಟು ಪತ್ರಗಳು ನನ್ನ ಬಳಿ ಬರೋದು. ಅವರನ್ನು ನೋಡಿ ಸಹಿ ಮಾಡಲಾ ಅಂದ್ರೆ ತಲೆ ಅಲ್ಲಾಡಿಸುತ್ತಿದ್ದರು.‌ ನಾನು ಸಹಿ ಮಾಡ್ತಿದ್ದೆ. ಅವರು ಸಿಎಂ ಆದಾಗ ನನ್ನ ನೋಟ್ ಗಳು ಹೋದಾಗ ಸಹಿ ಮಾಡಿ ಅಂತಿದ್ದೆ. ಆಗಲೂ ತಲೆ ಅಲ್ಲಾಡಿಸಿ ಸಹಿ ಮಾಡ್ತಾ ಇದ್ದರು. ಇದೆಲ್ಲವೂ ರಾಜಕಾರಣ ಹೊರತುಪಡಿಸಿ ಇರುವ ಸಂಬಂಧಗಳು ಎಂದು ನೆನೆದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top