Warning: Use of undefined constant _COOKIE - assumed '_COOKIE' (this will throw an Error in a future version of PHP) in /home/bhavyar4/public_html/hallikatte.com/wp-content/themes/flex-mag/admin/admin-interface.php on line 596

Warning: Cannot modify header information - headers already sent by (output started at /home/bhavyar4/public_html/hallikatte.com/wp-content/themes/flex-mag/admin/admin-interface.php:596) in /home/bhavyar4/public_html/hallikatte.com/wp-content/plugins/sg-cachepress/core/Supercacher/Supercacher_Helper.php on line 77
“ನಿಮಗೂ ಹೃದಯ ಇದೆ ಅಂತ ಖಾತ್ರಿ ಆಯ್ತು” ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಕಾಲೆಳೆದ ಈಶ್ವರಪ್ಪ! – Halli Katte
ಸಮಾಚಾರ

“ನಿಮಗೂ ಹೃದಯ ಇದೆ ಅಂತ ಖಾತ್ರಿ ಆಯ್ತು” ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಕಾಲೆಳೆದ ಈಶ್ವರಪ್ಪ!

ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯದ ಕುರಿತು ವಿಚಾರಿಸಿದರು. ಸಚಿವ ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಭೇಟಿ ವೇಳೆ ಹಾಜರಿದ್ದರು.

ಭೇಟಿ ವೇಳೆ ಸಚಿವ ಕೆ.ಎಸ್​ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲೆಳೆದಿದ್ಧಾರೆ. ‘ನಿಮಗೂ ಹಾರ್ಟ್​​ ಇರೋದು ಗ್ಯಾರಂಟಿ ಆಯ್ತು,’ ಎಂದು ಈಶ್ವರಪ್ಪ ನಗೆಚಟಾಕಿ ಹಾರಿಸಿದ್ದಾರೆ. ಅಷ್ಟೇ ಹಸನ್ಮುಖವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ “ನೀನೇನು ಇಲ್ಲಾ ಅಂದ್ಕೋಡಿದ್ಯಾ..?” ಎಂದು ಮರು ಪ್ರಶ್ನೆ ಹಾಕಿದರು. “ನಾನೆಲ್ಲಿ ಹಾಗಂತ ಬಾಯಿ ಬಿಟ್ಟು ಹೇಳಿದೆ” ಎಂದು ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು.

ಈಶ್ವರಪ್ಪ ಮಾತಿಗೆ ನಗೆ ಬೀರಿದ ಸಿದ್ದರಾಮಯ್ಯ “ನೀನು ಹ್ಯೂಮನ್‌ ಅನಾಟಮಿ ಓದ್ಕೊಂಡಿದ್ದಿಯೋ…!” ಎಂದು ಪ್ರಶ್ನಿಸಿದರು. ಇಬ್ಬರ ಈ ಸ್ವಾರಸ್ಯದ ಸಂಭಾಷಣೆಗೆ ಸಿಎಂ, ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸೇರಿ ಅಲ್ಲಿದ್ದವರೆಲ್ಲರೂ ಮನಸ್ಪೂರ್ತಿಯಾಗಿ ನಕ್ಕಿದ್ದರು.

ಇನ್ನು ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಬಿಎಸ್‍ವೈ, ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಮನೆಗೆ ತೆರಳಿದರೆ ಹೆಚ್ಚಿನ ಕಾರ್ಯಕರ್ತರು ಅಗಮಿಸುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿಯೇ ಹೆಚ್ಚಿನ ವಿಶ್ರಾಂತಿ ಪಡೆಯುತ್ತಿದ್ದಾರೆ. ನಮ್ಮ ಭೇಟಿಯಿಂದ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದರು ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top