fbpx
ಸಮಾಚಾರ

ಸರ್ಕಾರೀ ನೌಕರರಿಗೆ ಶಾಕ್: ನಾಲ್ಕನೇ ಶನಿವಾರ ರಜೆ ರದ್ದು!

ತಿಂಗಳಿಗೆ ಎರಡು ಶನಿವಾರ ಸೇರಿ ನಾಲ್ಕು ಭಾನುವಾರಗಳ ರಜೆ ಅನುಭವಿಸುತ್ತಿದ್ದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಆದರೆ ಇದು ಎಲ್ಲಾ ಸರ್ಕಾರಿ ನೌಕರರಿಗೂ ಅನ್ವಯಿಸುವುದಿಲ್ಲ.

ಆದರೆ ಹೊಸ ಸುತ್ತೋಲೆಯಂತೆ ಕರ್ನಾಟಕ ಉಚ್ಛನ್ಯಾಯಾಲಯ ಹಾಗೂ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳು ಮತ್ತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಪ್ರಾಸಿಕ್ಯೂಟರ್, ಸರ್ಕಾರಿ ವಕೀಲರು ಮತ್ತು ಆಯಾ ನ್ಯಾಯಾಲಯದಲ್ಲಿನ ಪ್ರಕರಣಗಳ ಬಗ್ಗೆ ಸಮನ್ವಯಿಸಲು ನೇಮಿಸಲಾದ ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ನ್ಯಾಯ ಪ್ರಕ್ರಿಯಿಗೆ ಹಾಜರಾಗುವ ಸರ್ಕಾರಿ ಅಧಿಕಾರಿಗಳಿಗೆ ನಾಲ್ಕನೇ ಶನಿವಾರದ ರಜೆಯನ್ನು ಈಗಿನಿಂದಲೇ ಜಾರಿಯಾಗುವಂತೆ ರದ್ದು ಮಾಡಲಾಗಿದೆ.

ಅಂದಹಾಗೇ.. ನಾಲ್ಕನೇ ಶನಿವಾರ ರಾಜ್ಯ ಸರ್ಕಾರ ರದ್ದುಗೊಳಿಸಿರುವ ರಜೆಯ ರದ್ದತಿಯು, ರಾಜ್ಯದ ಉಚ್ಚನ್ಯಾಯಾಲಯ, ಅಧೀನ ನ್ಯಾಯಾಲಯ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಸರಕಾರಿ ಅಭಿಯೋಜಕರಿಗಳಿಗೆ ಅನ್ವಯಿಸುತ್ತದೆ. ಇನ್ನುಳಿದಂತೆ ಇತರೆ ರಾಜ್ಯದ ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರ ಯಥಾ ಸ್ಥಿತಿಯಂತೆ ರಜೆ ಮುಂದವರೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top