fbpx
ಸಮಾಚಾರ

ಮತ್ತೆ ಗಾಯಗೊಂಡ ಶಿಖರ್ ಧವನ್ ಜಾಗಕ್ಕೆ ಕನ್ನಡಿಗ ಆಯ್ಕೆ!

ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿರುವುದರಿಂದ ಟಿ20 ತಂಡದಿಂದ ಹೊರಗುಳಿದಿದ್ದರು. ಇದೀಗ ಏಕದಿನ ತಂಡದಂದಲೂ ಹೊರಗುಳಿಯುವ ಸಾಧ್ಯತೆ ಬಹುತೇಕ ಹೆಚ್ಚಾಗಿದೆ. ಹೀಗಾಗಿ ಏಕದಿನ ತಂಡಕ್ಕೆ ಶಿಖರ್ ಬದಲಿಗೆ ಯಾರನ್ನು ಆಯ್ಕೆ ಮಾಡಬಹುದು ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.

ಗಾಯಾಳು ಶಿಖರ್ ಧವನ್ ಸ್ಥಾನಕ್ಕೆ ಕರ್ನಾಟಕ ಮಯಾಂಕ್ ಅಗರ್ವಾಲ್ ಅವರನ್ನು ಹೆಸರಿಸಲಾಗಿದೆ. ಆಗಲೇ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನ ಭದ್ರವಾಗಿಸಿರುವ ಮಯಾಂಕ್‌ಗೆ ಈಗ ಏಕದಿನದಲ್ಲೂ ತಮ್ಮ ಸಾಮರ್ಥ್ಯ ಸಾಬೀತು ಮಾಡುವ ಸುವರ್ಣಾವಕಾಶವೊದಗಿ ಬಂದಿದೆ.

ಸದ್ಯ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಆರಂಭಿಕರಾಗಿ ಕಾಣಿಸಿಕೊಂಡಿದ್ದಾರೆ. ಮಯಾಂಕ್​ ಬ್ಯಾಕ್​ಅಪ್ ಓಪನರ್ ಆಗಿ ತಂಡವನ್ನ ಸೇರಿಕೊಳ್ಳಲಿದ್ದಾರೆ. ಒಂದು ವೇಳೆ ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​, ಕೆ.ಎಲ್.ರಾಹುಲ್​ರನ್ನ ಮಿಡಲ್ ಆರ್ಡರ್​ನಲ್ಲಿ ಬ್ಯಾಟಿಂಗ್​ಗಿಳಿಸಿದ್ರೆ, ರೋಹಿತ್ ಶರ್ಮಾ ಜೊತೆ ಮಯಾಂಕ್ ಅಗರ್​ವಾಲ್ ಆರಂಭಿಕ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top