Warning: Use of undefined constant _COOKIE - assumed '_COOKIE' (this will throw an Error in a future version of PHP) in /home/bhavyar4/public_html/hallikatte.com/wp-content/themes/flex-mag/admin/admin-interface.php on line 596

Warning: Cannot modify header information - headers already sent by (output started at /home/bhavyar4/public_html/hallikatte.com/wp-content/themes/flex-mag/admin/admin-interface.php:596) in /home/bhavyar4/public_html/hallikatte.com/wp-content/plugins/sg-cachepress/core/Supercacher/Supercacher_Helper.php on line 77
ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಜತೆ ರಚಿತಾರಾಮ್ ‘ಸೂಪರ್ ಮಚ್ಚಿ’ – Halli Katte
ಸಮಾಚಾರ

ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಜತೆ ರಚಿತಾರಾಮ್ ‘ಸೂಪರ್ ಮಚ್ಚಿ’

‘ಬುಲ್ ಬುಲ್’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಡಿಂಪಲ್ ಹುಡುಗಿ ಬಿಂದ್ಯಾ ರಾಮ್ ಅಲಿಯಾಸ್ ರಚಿತಾ ರಾಮ್‌ ಈಗ ಸ್ಯಾಂಡಲ್‌ವುಡ್ ಸಾಕು ಎಂದು ಟಾಲಿವುಡ್‌ಗೆ ಹಾರಲು ರೆಡಿಯಾಗಿದ್ದಾರೆ. ಕೆಲ ದಿನಗಳಿಂದ ರಚಿತಾ ಟಾಲಿವುಡ್‌ ಚಿತ್ರರಂಗಕ್ಕೆ ಎಂಟ್ರಿ ಕೊಡುವ ವಿಚಾರದ ಬಗ್ಗೆ ಗುಸುಗುಸು ಕೇಳಿ ಬರುತ್ತಿದ್ದು ಪ್ರೀತಿಯ ಅಕ್ಕನ ಮದುವೆ ನಂತರ ಹರಿದಾಡುತ್ತಿದ್ದ ಮಾತುಗಳಿಗೆ ಬ್ರೇಕ್ ಹಾಕಿದ್ದಾರೆ.

ಇದೀಗ ಆ ಬಗ್ಗೆ ಬಾಯ್ಬಿಟ್ಟಿರುವ ಅವರು, ತೆಲುಗು ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಅಭಿನಯಿಸುತ್ತಿರುವ ಕುರಿತು ಹೇಳಿಕೊಂಡಿದ್ದಾರೆ. ಅಂದಹಾಗೆ ಅವರು ಟಾಲಿವುಡ್​ಗೆ ‘ಸೂಪರ್ ಮಚ್ಚಿ’ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಅಂದರೆ ‘ಮೆಗಾ ಸ್ಟಾರ್’ ಚಿರಂಜೀವಿ ಅವರ ಅಳಿಯ ಕಲ್ಯಾಣ್ ದೇವ್ ಅಭಿನಯಿಸಲಿರುವ ‘ಸೂಪರ್ ಮಚ್ಚಿ’ ಸಿನಿಮಾ ಮೂಲಕ ರಚಿತಾ ತೆಲುಗು ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಪುಲಿ ವಾಸು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಈ ಹಿಂದೆ ಬಾಲಕೃಷ್ಣ ಅವರ ಜತೆ ತೆಲುಗು ಚಿತ್ರದಲ್ಲಿನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಅದು ನಿಜವಲ್ಲಎಂದಿದ್ದಾರೆ ಅವರು. ‘ಈ ಸುದ್ದಿ ನಾನೂ ನೋಡಿದ್ದೇನೆ. ಅದು ಸುಳ್ಳು. ಇದರಿಂದ ಅಭಿಮಾನಿಗಳು ನಿರಾಶರಾಗಬೇಕಿಲ್ಲ. ಈಗ ತೆಲುಗು ಚಿತ್ರದಲ್ಲಿ ನಟಿಸ್ತಿರೋದ್ರಿಂದ ಅವರಿಗೆ ನಿರಾಸೆ ಮಾಡ್ತಿಲ್ಲಎಂದುಕೊಂಡಿದ್ದೇನೆ’ ಎಂದಿದ್ದಾರೆ ಅವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top