Warning: Use of undefined constant _COOKIE - assumed '_COOKIE' (this will throw an Error in a future version of PHP) in /home/bhavyar4/public_html/hallikatte.com/wp-content/themes/flex-mag/admin/admin-interface.php on line 596

Warning: Cannot modify header information - headers already sent by (output started at /home/bhavyar4/public_html/hallikatte.com/wp-content/themes/flex-mag/admin/admin-interface.php:596) in /home/bhavyar4/public_html/hallikatte.com/wp-content/plugins/sg-cachepress/core/Supercacher/Supercacher_Helper.php on line 77
ಗಳ ಗಳನೇ ಅತ್ತು ಕಣ್ಣೀರು ಸುರಿಸಿದ ನಿಖಿಲ್ ಕುಮಾರಸ್ವಾಮಿ – Halli Katte
ಸಮಾಚಾರ

ಗಳ ಗಳನೇ ಅತ್ತು ಕಣ್ಣೀರು ಸುರಿಸಿದ ನಿಖಿಲ್ ಕುಮಾರಸ್ವಾಮಿ

ಕೆ.ಆರ್ ಪೇಟೆಯಲ್ಲಿ ಜೆಡಿಎಸ್ ಸೋಲಿಗೆ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಉಪ ಚುನಾವಣೆಯಲ್ಲಿ ಅನರ್ಹರು ಗೆದ್ದಿರ ಬಹುದು, ಆದರೆ ಇದು ಅವರಿಗೆ ಮತ ನೀಡಿದ ಮತದಾರರ ಸೋಲು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮದವೊಂದರಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಫಲಿತಾಂಶವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ರೈತರ ಸಾಲಮನ್ನಾ ಮಾಡಿದ ಕುಮಾರಸ್ವಾಮಿಯನ್ನು ಜನ ಕೈ ಹಿಡಿಯಲಿಲ್ಲ. ನಮ್ಮ ತಂದೆ ರಾಜ್ಯದ ಜನತೆಗೆ ಏನು ಅನ್ಯಾಯ ಮಾಡಿದ್ದಾರೆ. ಇದು ಅನರ್ಹರ ಗೆಲುವಾಗಿರಬಹುದು. ಆದರೆ ಅವರಿಗೆ ಮತ ನೀಡಿದ ಮತದಾರರ ಸೋಲು ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ತಂದೆ ಕುಮಾರಣ್ಣ 38 ಸ್ಥಾನ ಪಡೆದು ಸಿಎಂ ಆಗಿದ್ದರು. ಬಹುಮತ ಇಲ್ಲದಿದ್ರೂ ಹೇಳಿದ ಹಾಗೆ ಅವರು ರೈತರ ಸಾಲಮನ್ನಾ ಮಾಡಿದ್ದರು. ರೈತರ ಸಾಲಮನ್ನಾ ಮಾಡುವ ಕಾಯಕ ಮಾಡಿ ಉಪಚುನಾವಣೆಗೆ ಬಂದೆವು. ಆದರೆ ರಾಜ್ಯದ ಜನರು ಕುಮಾರಣ್ಣನ ಕೈ ಹಿಡಿಯಲಿಲ್ಲ.. ಉಪಚುನಾವಣೆಯ ಫಲಿತಾಂಶ ಕಂಡು ಕುಮಾರಣ್ಣ ತುಂಬಾ ನೋವುಪಟ್ಟುಕೊಂಡರು. ಕೆ.ಆರ್ ಪೇಟೆ ಜನ ಸಹ ನಮ್ಮನ್ನು ಕೈ ಬಿಟ್ಟರು ಯಾಕೆ ಎಂದು ಗೊತ್ತಿಲ್ಲ? ರಾಜ್ಯದ ಜನತೆಗೆ ನಮ್ಮ ತಂದೆ ಏನು ಅನ್ಯಾಯ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಕಣ್ಣೀರು ಹಾಕಿದರು.

ಇಂದು ಕುಮಾರಣ್ಣನ ಆರೋಗ್ಯ ಸ್ಥಿತಿ ಹೇಳಲು ಇಷ್ಟಪಡಲ್ಲ. ಏಕೆಂದರೆ ಕನಿಕರ ಪಡೆದು ಮತ ಹಾಕಿಸಿಕೊಳ್ಳುವ ನೀಚರೂ ನಾವಲ್ಲ. ಕುಮಾರಸ್ವಾಮಿಯವರು ಕಳೆದ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ಹಾಗಾಗಿ ಕಾರ್ಯಕ್ರಮ ಬೇಗ ಮುಗಿಸಲು ಅಗುತ್ತಾ ಎಂದು ಆಗಲೇ ಕೇಳಿದೆ. ಏಕೆಂದರೆ ನಮ್ಮ ತಂದೆ ಒಬ್ಬರೇ ಮನೆಯಲ್ಲಿದ್ದಾರೆ. ಮಗನಾಗಿ ನನ್ನ ತಂದೆ ಮೇಲೆ ನನಗೆ ಕಾಳಜಿ ಇದೆ. ಆದರೆ ನನ್ನ ಆರೋಗ್ಯದ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top