fbpx
ಸಮಾಚಾರ

“ಅಭಿವೃದ್ಧಿಯ ಸುವರ್ಣ ಯುಗ ಸ್ಥಾಪನೆಯ ಪರ್ವ ಆರಂಭ” ಬಿಜೆಪಿ ಗೆಲುವಿನ ಬಗ್ಗೆ ಜಗ್ಗೇಶ್ ಪ್ರತಿಕ್ರಿಯಿಸಿದ್ದು ಹೀಗೆ!

ರಾಜ್ಯ ವಿಧಾನಸಬೆ ಉಪ ಚುನಾವಣೆಯಲ್ಲಿ ಬಿಜೆಪಿ ಹನ್ನೆರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲಿ ಸ್ಯಾಂಡಲ್ ವುಡ್ ನಟ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಯಿಸಿದ್ದಾರೆ. ಖ್ಯಾತ ನಟ ನವರಸ ನಾಯಕ ಟ್ವೀಟ್ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.

 

 

ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶುಭಾಶಯ ತಿಳಿಸಿರುವ ಜಗ್ಗೇಶ್ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಮಗೆ ಶಕ್ತಿ ನೀಡಿದ ಮತದಾರ ಬಂಧುಗಳಿಗೆ ಧನ್ಯವಾದಗಳು. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಇರೋದರಿಂದ ಅಭಿವೃದ್ಧಿಗಳು ಕೆಲಸಗಳು ವೇಗ ಪಡೆದುಕೊಳ್ಳಲಿವೆ ಎಂದು ಜಗ್ಗೇಶ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ,.

“ನಲ್ಮೆಯ ನಾಯಕರು ಯಡಿಯೋರಪ್ಪಜೀ ರವರ ಗೆಲುವಿನಲ್ಲಿ ಭಾಗಿಯಾಗಿ ಸಂತೋಷ ಹಂಚಿಕೊಂಡ ಕ್ಷಣ.. ಧನ್ಯವಾದಗಳು ನಮಗೆ ಶಕ್ತಿ ನೀಡಿದ ಮತದಾರ ಬಂಧುಗಳಿಗೆ.. ರಾಷ್ಟ್ರ ರಾಜ್ಯದ ಏಕಮೇವ ಸರ್ಕಾರದಲ್ಲಿ ಅಭಿವೃದ್ಧಿಯ ಸುವರ್ಣಯುಗ ಸ್ಥಾಪನೆಪರ್ವ ಇಂದಿನಿಂದ.. ಶುಭಮಸ್ತು.” ಎಂದು ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top