fbpx
ಸಮಾಚಾರ

ಕಾಂಗ್ರೆಸ್​ ಸೋಲಿನ ಬೆನ್ನಲ್ಲೇ ಬಿಜೆಪಿಗೆ ಸೇರ್ಪಡೆಗೊಂಡ ‘ಹೌದು ಹುಲಿಯಾ’

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಲ್​ಪಿ ನಾಯಕ ಸ್ಥಾನವನ್ನು, ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ‘ಹುಲಿಯಾ’ ಖ್ಯಾತಿಯ ವ್ಯಕ್ತಿ ಬಿಜೆಪಿಗೆ ಸೇರಿದ್ದಾರೆ.

ಕಾಗವಾಡ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಜಯಭೇರಿ ಹಿನ್ನೆಲೆಯಲ್ಲಿ ಹೌದು ಹುಲಿಯಾ ಜೊತೆಗೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಕಾಗವಾಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಒತ್ತಾಯದ ಮೇರೆಗೆ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಪೀರಪ್ಪ ಕೂಡ ಬಿಜೆಪಿ ಮುಖಂಡರಿಗೆ ಹುಲಿ ಹುಲಿ ಎಂದು ಕರೆದು ಖುಷಿ ಪಟ್ಟಿದ್ದಾನೆ.

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಹೌದು ಹುಲಿಯಾ ಖ್ಯಾತಿಯ ಪೀರಪ್ಪ ಕಟ್ಟಿಮನಿ ಬಿಜೆಪಿ ಶಾಲು ಧರಿಸಿ, ತಲೆಗೆ ಬಿಜೆಪಿಯ ಕಮಲದ ಟೋಪಿ ಇಟ್ಟುಕೊಂಡು ಗುಲಾಲ ಎರಚಿ ಬಿಜೆಪಿ ಕಾರ್ಯಕರ್ತರ ಜೊತೆಗೆ ಸಂಭ್ರಮಿಸಿದ್ದಾನೆ.

ಉಪ ಚುನಾವಣೆಯ ಕಾಗವಾಡ ಕ್ಷೇತ್ರದ ಪ್ರಚಾರ ಸಂದರ್ಭದಲ್ಲಿಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗ ಭಾಷಣ ಸಂದರ್ಭದಲ್ಲಿ’ಹೌದು ಹುಲಿಯಾ’ ಎಂದು ಕೂಗಿ ಭಾರಿ ಚರ್ಚೆಗೆ ಕಾರಣವಾಗಿದ್ದ ಪೀರಪ್ಪ ಸೋಮವಾರ ಚುನಾವಣೆ ಫಲಿತಾಂಶದ ವೇಳೆ ಕಾಗವಾಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಕಮಲದ ಟೋಪಿ ಧರಿಸಿ, ಗುಲಾಲ್‌ನಲ್ಲಿಮಿಂದೆದ್ದು ‘ಹೌದು ಹುಲಿಯಾ ಅಲ್ಲ, ಹೌದು ರಾಜಾಹುಲಿ’ ಎನ್ನುತ್ತಾ ಗಮನ ಸೆಳೆದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top