Warning: Use of undefined constant _COOKIE - assumed '_COOKIE' (this will throw an Error in a future version of PHP) in /home/bhavyar4/public_html/hallikatte.com/wp-content/themes/flex-mag/admin/admin-interface.php on line 596

Warning: Cannot modify header information - headers already sent by (output started at /home/bhavyar4/public_html/hallikatte.com/wp-content/themes/flex-mag/admin/admin-interface.php:596) in /home/bhavyar4/public_html/hallikatte.com/wp-content/plugins/sg-cachepress/core/Supercacher/Supercacher_Helper.php on line 77
ಆಸ್ಟ್ರೇಲಿಯಾ ಉದ್ಯಮಿ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ರಚಿತಾ ಸಹೋದರಿ ನಿತ್ಯ ರಾಮ್! – Halli Katte
ಸಮಾಚಾರ

ಆಸ್ಟ್ರೇಲಿಯಾ ಉದ್ಯಮಿ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ರಚಿತಾ ಸಹೋದರಿ ನಿತ್ಯ ರಾಮ್!

ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲ್ಲೊಂದು ಶುಭ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಒಬ್ಬರಾದ ನಂತರ ಮತ್ತೊಬ್ಬರು ಸಪ್ತಪದಿ ತುಳಿಯುತ್ತಿದ್ದಾರೆ. ಈ ಪಟ್ಟಿಗೆ ಕೆಲವು ದಿನಗಳ ಹಿಂದೆ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಸೇರಿಕೊಂಡರು. ಈಗ ಡಿಂಪಲ್ ಹುಡುಗಿ ರಚಿತಾ ರಾಮ್ ಅಕ್ಕ, ಸ್ಮಾಲ್ ಸ್ಕ್ರೀನ್ ನಟಿ ನಿತ್ಯಾ ರಾಮ್ ಸೇರಿಕೊಂಡಿದ್ದಾರೆ.

ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿತ್ಯ ರಾಮ್ ಅವರು ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಅವರ ಜೊತೆ ಡಿಸೆಂಬರ್ 6ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ.

ಗೌತಮ್ ಹಾಗೂ ನಿತ್ಯಾ ಮದುವೆಗಾಗಿಯೇ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸ್ಪೆಷಲ್ ಸೆಟ್ ಹಾಕಲಾಗಿತ್ತು. ಇಲ್ಲಿ ಈ ಜೋಡಿ ಗುರು-ಹಿರಿಯರು ನಿಶ್ಚಯಿಸಿದ್ದ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆಗೆ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ.

ಅಂದಹಾಗೆ ‘ಬೆಂಕಿಯಲ್ಲಿ ಅರಳಿದ ಹೂವು’, ‘ಕರ್ಪೂರದ ಗೊಂಬೆ’, ‘ರಾಜಕುಮಾರಿ’, ‘ಎರಡು ಕನಸು’, ನಂದಿನಿ’ ಧಾರಾವಾಹಿಗಳಲ್ಲಿ ನಿತ್ಯ ರಾಮ್ ನಟಿಸಿದ್ದಾರೆ. ಕನ್ನಡದ ‘ಮುದ್ದು ಮನಸು’ ಸಿನಿಮಾದಲ್ಲೂ ನಿತ್ಯ ರಾಮ್ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top