Warning: Use of undefined constant _COOKIE - assumed '_COOKIE' (this will throw an Error in a future version of PHP) in /home/bhavyar4/public_html/hallikatte.com/wp-content/themes/flex-mag/admin/admin-interface.php on line 596

Warning: Cannot modify header information - headers already sent by (output started at /home/bhavyar4/public_html/hallikatte.com/wp-content/themes/flex-mag/admin/admin-interface.php:596) in /home/bhavyar4/public_html/hallikatte.com/wp-content/plugins/sg-cachepress/core/Supercacher/Supercacher_Helper.php on line 77
ಕ್ಯಾನ್ಸರ್‌ನಿಂದ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಅವರ 26 ವರ್ಷದ ಸಹೋದರಿ ನಿಧನ! – Halli Katte
ಸಮಾಚಾರ

ಕ್ಯಾನ್ಸರ್‌ನಿಂದ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಅವರ 26 ವರ್ಷದ ಸಹೋದರಿ ನಿಧನ!

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಸಹೋದರಿ ಶ್ಯಾಮಾ ತಮ್ಶಿ ಸಿದ್ದಿಕಿ(26) ಕ್ಯಾನ್ಸರ್ ವಿರುದ್ಧದ ಸುದೀರ್ಘಹೋರಾಟದ ನಂತರ ಶನಿವಾರ ನಿಧನರಾದರೆಂದುಯ್ ಕುಟುಂಬ ಮೂಲಗಳು ಹೇಳಿದೆ. ಶ್ಯಾಮಾ ಅವರಿಗೆ 18 ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಎಂಟು ವರ್ಷಗಳಿಂದ ಈ ಕಾಯಿಲೆಯೊಂದಿಗೆ ಹೋರಾಟ ನಡೆಸಿದ್ದರು.

ಸಹೋದರಿಯ ಸಾವಿನ ಸಮಯದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರು ಅಮೆರಿಕದಲ್ಲಿ ನೋ ಲ್ಯಾಂಡ್ಸ್ ಮ್ಯಾನ್ ಎಂಬ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇಂದು ತಮ್ಮ ಸ್ವಗ್ರಾಮ ಉತ್ತರ ಪ್ರದೇಶದ ಬುಧಾನ ಗ್ರಾಮದಲ್ಲಿ ಅಂತ್ಯಕ್ರಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

 

ಕಳೆದ ಅಕ್ಟೋಬರ್ ನಲ್ಲಿ ನಟ ನವಾಜುದ್ದೀನ್ ತನ್ನ ಸೋದರಿಯ ಕ್ಯಾನ್ಸರ್ ರೋಗದ ಬಗೆಗೆ ಟ್ವೀಟ್ ಮೂಲಕ ಹಂಚಿಕೊಂಡಿದ್ದರು. “ನನ್ನ ತಂಗಿಗೆ 18 ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಆದರೆ ಆಕೆಯ ವಿಲ್ ಪವರ್(ಇಚ್ಚಾಶಕ್ತಿ) ಹಾಗೂ ಧೈರ್ಯವೇ ಆಕೆಯನ್ನು ಇಲ್ಲಿವರೆಗೆ ಬದುಕಿಸಿದೆ.ಅವಳು ಇಂದು 25 ನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ. ತನ್ನ ಕಾಯಿಲೆ ವಿರುದ್ಧ ಇನ್ನೂ ಹೋರಾಟ ಮುಂದುವರಿಸಿದ್ದಾಳೆ” ಎಂದು ಅವರು ಬರೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top