Warning: Use of undefined constant _COOKIE - assumed '_COOKIE' (this will throw an Error in a future version of PHP) in /home/bhavyar4/public_html/hallikatte.com/wp-content/themes/flex-mag/admin/admin-interface.php on line 596

Warning: Cannot modify header information - headers already sent by (output started at /home/bhavyar4/public_html/hallikatte.com/wp-content/themes/flex-mag/admin/admin-interface.php:596) in /home/bhavyar4/public_html/hallikatte.com/wp-content/plugins/sg-cachepress/core/Supercacher/Supercacher_Helper.php on line 77
ವಿಕೆಟ್ ಪಡೆದು ಮ್ಯಾಜಿಕ್, ಕರವಸ್ತ್ರವನ್ನು ಕೋಲಾಗಿಸಿದ ಕ್ರಿಕೆಟಿಗ: ವೀಡಿಯೋ ವೈರಲ್ – Halli Katte
ಸಮಾಚಾರ

ವಿಕೆಟ್ ಪಡೆದು ಮ್ಯಾಜಿಕ್, ಕರವಸ್ತ್ರವನ್ನು ಕೋಲಾಗಿಸಿದ ಕ್ರಿಕೆಟಿಗ: ವೀಡಿಯೋ ವೈರಲ್

ಬೌಲರ್ ಓರ್ವ ವಿಕೆಟ್ ಪಡೆದಾಗ ವಿಭಿನ್ನ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಕೆಲವರು ಅತಿರೇಕವಾಗಿ ವರ್ತಿಸುತ್ತಾರೆ. ಹೀಗೆ ಹಲವು ರೀತಿಯಲ್ಲಿ ಸಂಭ್ರಮವನ್ನು ಆಚರಿಸಿಕೊಳ್ಳುತ್ತಾರೆ. ಹಾಗಿದ್ದರೆ ವಿಕೆಟ್ ಪಡೆದಾಗ ‘ಮ್ಯಾಜಿಕ್’ ಮಾಡಿ ಸಂಭ್ರಮಾಚರಣೆಯನ್ನು ಮಾಡಿರುವ ಘಟನೆಯನ್ನು ಎಂದಾದರೂ ನೋಡಿರುವೀರಾ? ಹೌದು, ಇದನ್ನು ನಂಬಲೇಬೇಕು.

 

 

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಂಝಾಂಸಿ ಸೂಪರ್ ಲೀಗ್ (ಎಂಎಸ್‍ಎಲ್) ಟಿ20 ಪಂದ್ಯದಲ್ಲಿ ಪಾರ್ಲ್ ರಾಕ್ಸ್ ತಂಡದ ಲೆಗ್ ಸ್ಪಿನ್ನರ್ ತಬ್ರೇಜ್ ಶಮ್ಸಿ ಮ್ಯಾಜಿಕ್ ಮಾಡಿದ್ದಾರೆ. ಬುಧವಾರ ಪಾರ್ಲ್ ರಾಕ್ಸ್ ಮತ್ತು ಡರ್ಬನ್ ಹೀಟ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ವೇಳೆ ಡರ್ಬನ್ ಹೀಟ್ ತಂಡದ ವಿಹಾನ್ ಲಬ್ಬೆ ಶಮ್ಸಿ ಎಸೆತವನ್ನು ಬಲವಾಗಿ ಹೊಡೆಯಲು ಹೋಗಿ ಕ್ಯಾಚ್ ನೀಡಿ ಔಟಾದರು.

ವಿಕೆಟ್ ಪಡೆದ ಸಂಭ್ರಮದಲ್ಲಿ ಶಮ್ಸಿ ಕೆಂಪು ಬಣ್ಣದ ಕರವಸ್ತ್ರವನ್ನು ತೆಗೆದು ಅದರಲ್ಲಿ ಬಿಳಿ ಬಣ್ಣದ ದಂಡವನ್ನು ಹೊರ ತೆಗೆಯುವ ಮೂಲಕ ಜಾದು ಮಾಡಿ ಸಂಭ್ರಮಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಶಮ್ಸಿ ಜಾದೂ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಮ್ಸಿ ಜಾದೂಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top