Warning: Use of undefined constant _COOKIE - assumed '_COOKIE' (this will throw an Error in a future version of PHP) in /home/bhavyar4/public_html/hallikatte.com/wp-content/themes/flex-mag/admin/admin-interface.php on line 596

Warning: Cannot modify header information - headers already sent by (output started at /home/bhavyar4/public_html/hallikatte.com/wp-content/themes/flex-mag/admin/admin-interface.php:596) in /home/bhavyar4/public_html/hallikatte.com/wp-content/plugins/sg-cachepress/core/Supercacher/Supercacher_Helper.php on line 77
“ನಾನು ಈರುಳ್ಳಿ ತಿನ್ನೋದಿಲ್ಲ, ಮನೆಗೆ ತರೋದಿಲ್ಲ, ನನಗೆ ಚಿಂತೆಯಿಲ್ಲ” ಸಚಿವೆ ನಿರ್ಮಲಾ ಸೀತಾರಾಮನ್! – Halli Katte
ಸಮಾಚಾರ

“ನಾನು ಈರುಳ್ಳಿ ತಿನ್ನೋದಿಲ್ಲ, ಮನೆಗೆ ತರೋದಿಲ್ಲ, ನನಗೆ ಚಿಂತೆಯಿಲ್ಲ” ಸಚಿವೆ ನಿರ್ಮಲಾ ಸೀತಾರಾಮನ್!

ರಾಷ್ಟ್ರದಾದ್ಯಂತ ಈರುಳ್ಳಿ ಬೆಲೆ ಪ್ರಸ್ತುತ 100 ರೂ ಗಿಂತ ಅಧಿಕವಾಗಿದೆ. ಮುಂದಿನ ದಿನಗಳಲ್ಲಿ ಈ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈರುಳ್ಳಿ ಬೆಲೆ ಏರಿಕೆ ಕುರಿತ ಚರ್ಚೆ ಇಂದು ಲೋಕಸಭಾ ಕಲಾಪದಲ್ಲಿ ಕಾವೇರಿತ್ತು. ಆದರೆ, ಚರ್ಚೆಯ ವೇಳೆ ಎನ್​ಸಿಪಿ ಸಂಸದೆ ಸುಪ್ರಿಯಾ ಸುಲೆ ಅವರ ಪ್ರಶ್ನೆಗೆ ಉತ್ತರಿಸುವ ಬರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೀಗ ದೇಶದಾದ್ಯಂತ ನಗೆಪಾಟಲಿಗೆ ಈಡಾಗಿದ್ದಾರೆ.

ಲೋಕಸಭೆಯಲ್ಲಿ ಈರುಳ್ಳಿ ಬೆಲೆ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ, ನಾನು ಈರುಳ್ಳಿ ತಿನ್ನದ ಮನೆತನದಿಂದ ಬಂದವಳಾಗಿದ್ದರಿಂದ ಬೆಲೆ ಏರಿಕೆ ನನಗೇನು ಪರಿಣಾಮ ಬೀರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಮ್ಮ ಮನೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸುವುದಿಲ್ಲ ಹೀಗಾಗಿ ಬೆಲೆ ಏರಿಕೆ ನನ್ನನ್ನು ಆತಂಕಕ್ಕೀಡು ಮಾಡಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಅವರು ಹೀಗೆ ಹೇಳಿರುವ ಸುಮಾರು 20 ಸೆಕೆಂಡುಗಳ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿದೆ.

ತನ್ನದೇ ಹೇಳಿಕೆಯಿಂದ ಕೆಲಕಾಲ ಸದನದಲ್ಲಿ ಮುಜುಗರಕ್ಕೆ ಈಡಾಗಿದ್ದ ಸಚಿವೆ ನಿರ್ಮಲಾ ಸೀತಾರಾಮನ್ ಕೆಲಕಾಲ ಸುಧಾರಿಸಿಕೊಂಡು ನಂತರ ಈರುಳ್ಳಿ ಬೆಲೆ ಏರಿಕೆಯ ಕಾರಣಗಳೇನು ಎಂದು ವಿವರಿಸಿದ್ದಾರೆ. ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಜಾರಿಗೆ ತರುವ ಮೂಲಕ ಈರುಳ್ಳಿ ಬಿಕ್ಕಟ್ಟನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಆಮದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ ಮತ್ತು ಅವುಗಳ ಶೇಖರಣೆಗೆ ಸಂಬಂಧಿಸಿದ ಹಲವಾರು ರಚನಾತ್ಮಕ ಸಮಸ್ಯೆಗಳಿವೆ, ಅದನ್ನು ಸರ್ಕಾರವು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top