fbpx
ಸಮಾಚಾರ

ಕಿರುತೆರೆ ಷೋ ನಿರೂಪಣೆ ಮಾಡ್ತಾರಾ ದರ್ಶನ್? ಸ್ಪಷ್ಟನೆ ನೀಡಿದ ಚಾಲೆಂಜಿಂಗ್ ಸ್ಟಾರ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ವರ್ಷ ಕಿರುತೆರೆಗೆ ಕಾಲಿಡುತ್ತಾರೆ ಎಂಬ ಬಗ್ಗೆ ಇತ್ತೀಚಿಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ದರ್ಶನ್ ಪ್ರಖ್ಯಾತ ರಿಯಾಲಿಟಿ ಶೋವೊಂದರ ನಿರೂಪಣೆ ಮಾಡುತ್ತಾರೆ ಎಂಬ ಬಗ್ಗೆ ಸಾಕಷ್ಟು ವಾದಗಳು ಏರ್ಪಟ್ಟಿತ್ತು. ದರ್ಶನ್ ಈ ಬಗ್ಗೆ ಉತ್ತರ ನೀಡಿದ್ದಾರೆ.

ದರ್ಶನ್ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಕಿರುತೆರೆ ಎಂಟ್ರಿಯ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಕೇಳಿದಕ್ಕೆ ದರ್ಶನ್ ನಗುತ್ತ “ನನಗೆ ಎರಡು ಕಡೆ ಅಭಿನಯಿಸಲು ಬರಲ್ಲ, ನಾನೀಗ ಸದ್ಯ ಬೆಳ್ಳಿ ತೆರೆಮೇಲೆ ಅಭಿನಯಿಸುವುದನ್ನು ಎಂಜಾಯ್ ಮಾಡುತ್ತಿದ್ದೀನಿ. ಸದ್ಯ ನಾನು ಕಿರುತೆರೆಗೆ ಬರುವ ಬಗ್ಗೆ ಯೋಚನೆ ಕೂಡ ಮಾಡಿಲ್ಲ” ಎಂದು ಹೇಳಿದರು. ಈ ಮೂಲಕ ಕಿರುತೆರೆ ಎಂಟ್ರಿ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಸದ್ಯ ದರ್ಶನ್​ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಡಿಸೆಂಬರ್ 12 ರಂದು ದರ್ಶನ್​ ಅಭಿನಯದ ‘ಒಡೆಯ‘ ಸಿನಿಮಾ ರಾಜ್ಯಾದ್ಯಂತ ಬೆಳ್ಳಿ ತೆರೆಗೆ ಬರುತ್ತಿದೆ. ಇದರ ಜೊತೆ ರಾಬರ್ಟ್ ಶೂಟಿಂಗ್‌ನಲ್ಲಿ ಬ್ಯುಸಿ. ನಂತ್ರ ಇತ್ತೀಚೆಗೆ ಸೆಟ್ಟೇರಿದ ಮದಕರಿ ನಾಯಕ ಚಿತ್ರಕ್ಕೆ ತಯಾರಿ ಮಾಡಿಕೊಳ್ಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top