Warning: Use of undefined constant _COOKIE - assumed '_COOKIE' (this will throw an Error in a future version of PHP) in /home/bhavyar4/public_html/hallikatte.com/wp-content/themes/flex-mag/admin/admin-interface.php on line 596

Warning: Cannot modify header information - headers already sent by (output started at /home/bhavyar4/public_html/hallikatte.com/wp-content/themes/flex-mag/admin/admin-interface.php:596) in /home/bhavyar4/public_html/hallikatte.com/wp-content/plugins/sg-cachepress/core/Supercacher/Supercacher_Helper.php on line 77
ಸರಳವಾಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಇನ್ಫೋಸಿಸ್ ದಂಪತಿಯ ಪುತ್ರ! – Halli Katte
ಸಮಾಚಾರ

ಸರಳವಾಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಇನ್ಫೋಸಿಸ್ ದಂಪತಿಯ ಪುತ್ರ!

ಇನ್ಫೋಸಿಸ್ ದಂಪತಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಮಗನ ಮದುವೆ ಸೋಮವಾರ ಬೆಂಗಳೂರಿನ ಹೋಟೆಲಿನಲ್ಲಿ ಸರಳವಾಗಿ ನಡೆದಿದೆ. ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರ ಜೊತೆ ಮದುವೆಯಾಗಿದ್ದಾರೆ. ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬದ ಅತ್ಯಾಪ್ತರು ಮಾತ್ರವೇ ಭಾಗಿಯಾಗಿದ್ದಾರೆ.

ಅಪರ್ಣಾ, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕಮಾಂಡರ್‌ ಕೆ.ಆರ್‌. ಕೃಷ್ಣನ್‌ ಮತ್ತು ಎಸ್‌ಬಿಐನ ನಿವೃತ್ತ ಉದ್ಯೋಗಿ ಸಾವಿತ್ರಿ ಅವರ ಪುತ್ರಿ. ಲಂಡನ್‌ನ ಡರ್ತ್‌ಮೌತ್ ಕಾಲೇಜಿನಿಂದ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿರುವ ಅಪರ್ಣಾ ಓರ್ವ ಅತ್ಯುತ್ತಮ ಯೋಗಪಟು ಕೂಡಾ ಹೌದು. ಲಂಡನ್‌ನಿಂದ ಮರಳಿರುವ ಅಪರ್ಣಾ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನು ಅಪರ್ಣಾ ಹಾಗೂ ರೋಹನ್ ಇಬ್ಬರೂ ಕಳೆದ ಮೂರು ವರ್ಷಗಳಿಂದ ಸ್ನೇಹಿತರಾಗಿದ್ದಾರೆ.

ರೋಹನ್ ಗೆ ಎರಡನೇ ಮದುವೆ:
ರೋಹನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2011ರ ಜೂನ್‍ನಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ಮದುವೆಯಾಗಿದ್ದರು. 2015ರ ಎಪ್ರಿಲ್ ನಲ್ಲಿ ರೋಹನ್- ಲಕ್ಷ್ಮಿ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2015ರ ನವೆಂಬರಿನಲ್ಲಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top