Warning: Use of undefined constant _COOKIE - assumed '_COOKIE' (this will throw an Error in a future version of PHP) in /home/bhavyar4/public_html/hallikatte.com/wp-content/themes/flex-mag/admin/admin-interface.php on line 596

Warning: Cannot modify header information - headers already sent by (output started at /home/bhavyar4/public_html/hallikatte.com/wp-content/themes/flex-mag/admin/admin-interface.php:596) in /home/bhavyar4/public_html/hallikatte.com/wp-content/plugins/sg-cachepress/core/Supercacher/Supercacher_Helper.php on line 77
ಕೃಷ್ಣಮಠದಲ್ಲಿ ಎಡೆಸ್ನಾನಕ್ಕೂ ಗುಡ್ ಬೈ: ದಿಟ್ಟ ನಿರ್ಧಾರ! – Halli Katte
ಸಮಾಚಾರ

ಕೃಷ್ಣಮಠದಲ್ಲಿ ಎಡೆಸ್ನಾನಕ್ಕೂ ಗುಡ್ ಬೈ: ದಿಟ್ಟ ನಿರ್ಧಾರ!

ದೇಶಾದ್ಯಂತ ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಣೆ ಮಾಡಲಾಗುತ್ತಿದೆ. ಷಷ್ಠಿಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಡೆಸ್ನಾನವೋ.., ಮಡೆಸ್ನಾನ ಇರುತ್ತದೆ. ಆದರೆ ಈ ಬಾರಿ ನೂರಾರು ವರ್ಷದ ಸಂಪ್ರದಾಯವನ್ನು ಮುರಿದು ಕೃಷ್ಣಮಠದಲ್ಲಿ ಷಷ್ಠಿ ಆಚರಿಸಲಾಯಿತು.

ಪರ್ಯಾಯ ಪಲಿಮಾರು ಸ್ವಾಮೀಜಿ ‌ಗಳು ಇಂತಹದ್ದೊಂದು ಕ್ರಾಂತಿಕಾರಿ ನಿರ್ಧಾರಕ್ಕೆ ಬಂದಿದ್ದಾರೆ. ಕೆಲವರಿಗೆ ಇದು ಮೂಢನಂಬಿಕೆಯಂತೆಯೂ ಭಾಸವಾಗುತ್ತಿತ್ತು. ಈ ಸಂಬಂಧ ಮಡೆಸ್ನಾನ ನಿಷೇಧ ಆಗಬೇಕು ಎಂದು ಹಿಂದೆ ನ್ಯಾಯಾಲಯಕ್ಕೂ ದೂರು ಹೋಗಿತ್ತು. ಈ ವರ್ಷ ಯಾವುದೇ ಗೊಂದಲಕ್ಕೆ ಅವಕಾಶಗದಿರಲು ಪರ್ಯಾಯ ಶ್ರೀಗಳು ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ.

ಈ ಸಂದರ್ಭ ಮಾತನಾಡಿದ ಪಲಿಮಾರು ವಿದ್ಯಾಧೀಶ ಶ್ರೀಗಳು, ‘ವಿವಾದ ಬೇಡ ಎಂಬ ಕಾರಣಕ್ಕೆ ಶ್ರೀಕೃಷ್ಣಮಠದಲ್ಲಿ ಮಡೆ ಹಾಗೂ ಎಡಸ್ನಾನ ನಿಂತಿದೆ. ಬದಲಾಗಿ ಉರುಳುಸೇವೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಆಶ್ಲೇಷ ಬಲಿ ಸೇರಿದಂತೆ ಹಲವು ಪೂಜೆಗಳು ನಡೆಯುತ್ತಿವೆ ಎಂದರು.

ಹಿಂದೆ ಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿಯ ಮುಂದೆ ಭಕ್ತರು ಊಟ ಮಾಡಿದ ಎಂಜಲೆಲೆಗಳ ಮೇಲೆ ಹರಕೆ ಹೇಳಿದವರು ಉರುಳುವ ಮಡೆ (ಎಂಜಲು) ಸ್ನಾನ ನಡೆಯುತ್ತಿತ್ತು. ಐದು ವರ್ಷಗಳ ಹಿಂದೆ ಇದು ನಾಡಿನಾದ್ಯಂತ ವಿವಾದಕ್ಕೆ ಕಾರಣವಾದ ಮೇಲೆ ಪೇಜಾವರ ಶ್ರೀಗಳು ಇದನ್ನು ನಿಲ್ಲಿಸಿ, ಎಲೆಯ ಮೇಲೆ ಅನ್ನ (ಎಡೆ) ಬಡಿಸಿ, ಹರಕೆ ಹೊತ್ತವರು ಅದರ ಮೇಲೆ ಉರುಳಾಡುವ ಎಡೆಸ್ನಾನ ಜಾರಿಗೆ ಬಂತು. ಆದರೆ ಉಣ್ಣುವ ಅನ್ನದ ಮೇಲೆ ಉರುಳುವುದು ಎಷ್ಟುಸರಿ ಎನ್ನುವ ಆಕ್ಷೇಪ ಕೇಳಿ ಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top