fbpx
ಸಮಾಚಾರ

“ವಿಶ್ವನಾಥ್ ಗೆಲುವು ದೇವರಾಜ ಅರಸು, ನರೇಂದ್ರ ಮೋದಿ ಗೆಲುವು” ಶ್ರೀರಾಮುಲು

ಅಡಗೂರು ಎಚ್‌. ವಿಶ್ವನಾಥರ ಗೆಲುವು ದೇವರಾಜ ಅರಸರ, ಮೋದಿಯವರ ಜೊತೆಗೆ ಹುಣಸೂರು ಜನತೆಯ ಗೆಲುವುವೆಂಬು ಭಾವಿಸಿ, ಹುಣಸೂರು ಕ್ಷೇತ್ರವನ್ನು ಎಲ್ಲರೂ ಗಮನಿಸುತ್ತಿದ್ದಾರೆ.ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಎಚ್‌.ವಿಶ್ವನಾಥ್‌ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬಹಿರಂಗ ಸಭೆಯಲ್ಲಿಮಾತನಾಡಿ, ”ವಿಶ್ವನಾಥರ ತ್ಯಾಗದಿಂದಾಗಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಮಂತ್ರಿಯಾಗಿದ್ದ ವೇಳೆ ಶಿಕ್ಷಣ, ಸಹಕಾರ ಕ್ಷೇತ್ರದಲ್ಲಿಕ್ರಾಂತಿ ಉಂಟು ಮಾಡಿದ್ದಾರೆ. ಕ್ಷೇತ್ರದ ಮತದಾರ ಗೆಲ್ಲಿಸಿದ್ದೇ ಆದಲ್ಲಿಉನ್ನತ ಮಟ್ಟದ ಮಂತ್ರಿಯಾಗಲಿದ್ದಾರೆ. ಕ್ಷೇತ್ರದ ಅಭಿವೃದ್ದಿಗೆ ನಾಂದಿಯಾಗಲಿದೆ.” ಎಂದು ಹೇಳಿದರು

ನಾವು ಚುನಾವಣೆ ಗೆಲ್ಲಲೇಬೇಕು ಅಂತಾ ಮೋದಿ ಸೂಚಿಸಿದ್ದಾರೆ, ವಿಶ್ವನಾಥ್ ಗೆದ್ದ ಮರುದಿನವೇ ಮಂತ್ರಿಯಾಗುತ್ತಾರೆ. ವಿಶ್ವನಾಥ್ ಅವರನ್ನು ತುಳಿಯುವ ವ್ಯವಸ್ಥೆ ಮಾಡಿದ್ದು ಸಿದ್ದರಾಮಯ್ಯ, ಸಿದ್ದರಾಮಯ್ಯ ವಿಶ್ವನಾಥ್ ಶ್ರಮದಿಂದಲೇ ಸಿಎಂ ಆಗಿದ್ದು. ಸಿದ್ದರಾಮಯ್ಯಗೆ ಪಕ್ಷಾಂತರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಶ್ರೀರಾಮುಲು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top