‘ನಾನು ಮತ್ತೆ ಸಿನಿಮಾ ನಿರ್ದೇಶಿಸುವುದು ಸತ್ಯ. ಆದರೆ, ಅದು ರಿಮೇಕ್ ಚಿತ್ರವಲ್ಲ. ಸ್ವಮೇಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದೇನೆ’ ಎಂದು ನಟ ಕಮ್ ನಿರ್ದೇಶಕ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಜೋರಾಗಿ ಕೇಳಿ ಬರುತ್ತಿತ್ತು. ಅದು ಯಾವ ಸಿನಿಮಾ, ರಿಮೇಕಾ ಇಲ್ಲ ಸ್ವಮೇಕಾ ಎಂಬ ಪ್ರಶ್ನೆಗಳು ಸಹ ಅಭಿನಯ ಚಕ್ರವರ್ತಿ ಅಭಿಮಾನಿಗಳಲ್ಲಿತ್ತು. . ಅವರು ಟಾಲಿವುಡ್ ನಟ ಮಹೇಶ್ ಬಾಬು ನಟಿಸಿರುವ ತೆಲುಗಿನ ಚಿತ್ರವೊಂದನ್ನು ರಿಮೇಕ್ ಮಾಡಲಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಖುದ್ದಾಗಿ ಸುದೀಪ್ ಅವರೇ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ನನ್ನ ಥಿಯೇಟರ್ನಲ್ಲಿ #Terminatordarkfate ಖಾಸಗಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿದ್ದಕ್ಕಾಗಿ FoxStudios, ಹಾಗೂ ನೋಡಲು ಜೊತೆಗೂಡಿದ ನನ್ನ ಸೆಲೆಬ್ ಮತ್ತು ಕ್ರಿಕೆಟಿಂಗ್ ಸ್ನೇಹಿತರಿಗೆ ಧನ್ಯವಾದಗಳು.1ನೇ ಚೇಸ್ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಕನ್ನಡದಲ್ಲಿ ಚಿತ್ರ ನೋಡುವುದಕ್ಕೆ ಹೆಮ್ಮೆ.
ಇಂದು ಬಿಡುಗಡೆ. ತಪ್ಪದೆ ಕನ್ನಡದಲ್ಲಿ ನೋಡಿ 🤗 pic.twitter.com/wr9X6QIjOI— Kichcha Sudeepa (@KicchaSudeep) November 1, 2019
‘ನಾನು ನಿರ್ದೇಶಿಸುತ್ತಿರುವುದು ಒರಿಜಿನಲ್ ಸ್ಕ್ರಿಪ್ಟ್. ಈ ಚಿತ್ರದ ಕಥೆಗಾಗಿ ನಮ್ಮ ತಂಡದ ಸದಸ್ಯರು ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಆ ಕಥೆಯ ಬಗ್ಗೆ ನಾನು ಕೂಡ ಉತ್ಸುಕನಾಗಿದ್ದೇನೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ’ ಎಂದು ಸ್ಯಾಂಡಲ್ವುಡ್ ಬಿಗ್ ಬಾಸ್ ಸುದೀಪ್ ತಿಳಿಸಿದ್ದಾರೆ.ಅಲ್ಲಿಗೆ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದ್ದ ರಿಮೇಕಾ, ಸ್ವಮೇಕಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
