fbpx
ಸಮಾಚಾರ

ಲೇಸ್ ಆಮ್ಲೆಟ್ ತಯಾರಿಸಿದ ನಟಿ ರಾಗಿಣಿಗೆ ನೆಟ್ಟಿಗರಿಂದ ತರಾಟೆ!

ಲೇಸ್‍ ಪ್ಯಾಕೆಟ್ ನಲ್ಲಿ ಆಮ್ಲೆಟ್ ತಯಾರಿಸಿದ್ದಕ್ಕೆ ನಟಿ ರಾಗಿಣಿ ದ್ವಿವೇದಿ ಅವರನ್ನು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ರಾಗಿಣಿ ತಮ್ಮ ಮನೆಯಲ್ಲಿ ಹೊಸ ರೆಸಿಪಿಯನ್ನು ತಯಾರಿಸಿದ್ದು ಅಡುಗೆ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಾಗಿಣಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಗಿಣಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಅವರು ‘ಲೇಸ್ ಆಮ್ಲೆಟ್’ ಎನ್ನುವ ಹೊಸ ರೆಸಿಪಿ ಮಾಡಿದ್ದಾರೆ. ಮೊಟ್ಟೆ, ಈರುಳ್ಳಿ, ಮಸಾಲೆ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು. ನಂತರ ಅದನ್ನು ಲೇಸ್ ಚಿಪ್ಸ್ ಪಾಕೆಟ್‍ಗೆ ಸ್ವಲ್ಪ ಹಾಕಿ ಕುದಿಯುತ್ತಿರುವ ನೀರಿನೊಳಗೆ ಇಟ್ಟು ಬೇಯಿಸಿದ್ದಾರೆ.

ಈ ವಿಡಿಯೋ ನೋಡಿದ ಅಭಿಮಾನಿಗಳು ರಾಗಿಣಿ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಈ ರೀತಿ ಪ್ಲಾಸ್ಟಿಕ್‍ನೊಳಗೆ ಬೇಯಿಸಿದ ಆಹಾರ ತಿನ್ನಬಾರದು, ಇದು ವಿಷಕಾರಿ. ಈ ರೀತಿ ಮಾಡುವುದರಿಂದ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ನಿಮ್ಮನ್ನು ಅನುಸರಿಸುವ ಅಭಿಮಾನಿಗಳಿಗೆ ಇಂಥಾ ಕೆಟ್ಟ ಸಂದೇಶಗಳನ್ನು ನೀವು ನೀಡಬಾರದು ಎಂದು ರಾಗಿಣಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top