fbpx
ಸಮಾಚಾರ

ವಿಶ್ವಕಪ್ ಫೈನಲಿನಲ್ಲಿ ನನ್ನ ಶತಕ ತಪ್ಪಿಸಿದ್ದೇ ಧೋನಿ: ಮಾಹಿ ವಿರುದ್ಧ ‘ಗಂಭೀರ’ ಆರೋಪ!

2011ರ ವಿಶ್ವಕಪ್ ಗೆಲ್ಲುವಲ್ಲಿ ಭಾರತ ತಂಡದ ಅಂದಿನ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಕೂಡ ಪ್ರಮುಖ ಕಾರಣ. ವಿಶ್ವಕಪ್ ಸರಣಿಯುದ್ಧಕ್ಕೂ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಗೌತಮ್ ಗಂಭೀರ್ ಫೈನಲ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಕೇವಲ ಮೂರೇ ರನ್‌ನಿಂದ ತಮ್ಮ ಶತಕವನ್ನು ತಪ್ಪಿಸಿಕೊಂಡಿದ್ದರು. ವಿಶ್ವಕಪ್ ಫೈನಲ್‌ನಲ್ಲಿ 97ರನ್‌ಗೆ ವಿಕೆಟ್‌ ಕಳೆದುಕೊಂಡ ವಿಚಾರವಾಗಿ ಗಂಭೀರ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2011ರ ಫೈನಲ್ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿ ಬರೋಬ್ಬರಿ 28 ವರ್ಷದ ನಂತರ ವಿಶ್ವಕಪ್ ಅನ್ನು ಎತ್ತಿಹಿಡಿದಿತ್ತು. ಈ ಪಂದ್ಯದಲ್ಲಿ ಕೇವಲ ಮೂರು ರನ್‍ಗಳಿಂದ ಶತಕ ವಂಚಿತರಾಗಿದ್ದ ಗೌತಮ್ ಗಂಭೀರ್ ಅವರು, ನಾನು ಶತಕ ವಂಚಿತನಾಗಲು ಅಂದಿನ ನಾಯಕ ಎಂ.ಎಸ್ ಧೋನಿ ಅವರು ಕಾರಣ ಎಂದು ಹೇಳಿದ್ದಾರೆ.

ಖಾಸಗಿ ವೆಬ್‌ಸೈಟ್‌ವೊಂದಕ್ಕೆ ನೀಡಿ​ರುವ ವಿಡಿಯೋ ಸಂದ​ರ್ಶ​ನ​ದಲ್ಲಿ ಗಂಭೀರ್‌, ಧೋನಿ ವಿರುದ್ಧ ಹರಿ​ಹಾಯ್ದಿದ್ದಾರೆ. ‘ನಾ​ನೇಕೆ 97 ರನ್‌ಗಳಿಗೆ ಔಟಾದೆ, ಆಗ ಏನಾ​ಯಿ​ತು ಎನ್ನುವ ಪ್ರಶ್ನೆಯನ್ನು ಹಲವು ಬಾರಿ ಕೇಳ​ಲಾ​ಗಿದೆ. ನಾನು ಪ್ರತಿ​ಯೊ​ಬ್ಬ​ರಿಗೂ ಹೇಳ​ಲು ಇಚ್ಛಿ​ಸು​ತ್ತೇನೆ, 97 ರನ್‌ ತಲು​ಪುವ ವರೆಗೂ ನಾನು ನನ್ನ ವೈಯ​ಕ್ತಿಕ ಮೊತ್ತದ ಕಡೆ ಗಮನ ಹರಿ​ಸಿ​ರ​ಲಿಲ್ಲ. ಶ್ರೀಲಂಕಾ ನೀಡಿದ್ದ ಗುರಿ ತಲು​ಪು​ವು​ದೊಂದೇ ನನ್ನ ತಲೆಯಲ್ಲಿ​ತ್ತು’ ಎಂದು ಗಂಭೀರ್‌ ಹೇಳಿ​ದ್ದಾರೆ.

“ಆ ಸಮಯದಲ್ಲಿ ಒಂದು ಓವರ್ ಮುಗಿದ ನಂತರ, ‘ಮೂರು ರನ್ಗಳು ಉಳಿದಿವೆ, ಮೂರು ರನ್ ಗಳಿಸಿ ಮತ್ತು ನಿಮ್ಮ ಶತಕ ಪೂರ್ಣಗೊಳ್ಳುತ್ತದೆ’ ಎಂದು ಧೋನಿ ಹೇಳಿದ್ದರು. ನಾಯಕನ ಆ ಮಾತುಗಳ ತಕ್ಷಣ ನನ್ನ ಗಮನ ವೈಯ​ಕ್ತಿಕ ಸಾಧನೆಯತ್ತ ಹೊರ​ಳಿತು. ವೈಯ​ಕ್ತಿಕ ಮೊತ್ತದ ಬಗ್ಗೆ ಯೋಚಿ​ಸು​ವಾಗ ಏಕಾ​ಗ್ರತೆ ಹಾಳಾ​ಗು​ತ್ತದೆ. ನಾನು ಲಂಕಾ ನೀಡಿದ್ದ ಗುರಿಯನ್ನಷ್ಟೇ ಗಮ​ನ​ದ​ಲ್ಲಿ​ಟ್ಟು​ಕೊಂಡು ಆಟ ಮುಂದು​ವ​ರಿ​ಸಿ​ದ್ದರೆ ಸುಲಭವಾಗಿ ಶತಕ ಪೂರೈ​ಸು​ತ್ತಿದ್ದೆ’ ಎಂದು ಗಂಭೀರ್‌ ಬೇಸರ ವ್ಯಕ್ತ​ಪ​ಡಿ​ಸಿ​ದ್ದಾರೆ.

“ನಿಮ್ಮ ಮನಸ್ಸು ಇದ್ದಕ್ಕಿದ್ದಂತೆ ವೈಯಕ್ತಿಕ ಸಾಧನೆ, ವೈಯಕ್ತಿಕ ಸ್ಕೋರ್ ಕಡೆಗೆ ಚಲಿಸಿದಾಗ, ನಿಮ್ಮ ರಕ್ತ ವೇಗವಾಗಿ ಚಲಿಸಲು ಪ್ರಾರಂಭಿಸುತ್ತದೆ. ಆ ಕ್ಷಣದ ಮೊದಲು ನನ್ನ ಗುರಿ ಶ್ರೀಲಂಕಾ ಎದುರು ಗುರಿಯನ್ನು ಮಾತ್ರ ಸಾಧಿಸುವುದು. ನಾನು ಅದೇ ಮನಸ್ಥಿತಿಯಲ್ಲಿ ಇದ್ದಿದ್ದರೆ, ನನ್ನ ಶತಕವನ್ನು ಸುಲಭವಾಗಿ ಸಾಧಿಸಬಹುದಿತ್ತು” ಎಂದು ಅವರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top