fbpx
ಸಮಾಚಾರ

‘ಅಸ್ಪೃಶ್ಯತೆ’ ಬಗ್ಗೆ ಅವಹೇಳನ :ಚೈತ್ರಾ ಕೋಟೂರು ವಿರುದ್ಧ ಹೋರಾಟಕ್ಕಿಳಿದ ಅಂಬೇಡ್ಕರ್‌ ಸೇನೆ!

ಬಿಗ್ ಬಾಸ್ ಕನ್ನಡ ಸ್ಪರ್ಧಿ ಚೈತ್ರಾ ಕೋಟೂರು ನೀಡಿರುವ ಹೇಳಿಕೆಯೊಂದರ ವಿರುದ್ಧ ಇದೀಗ ಅಂಬೇಡ್ಕರ್‌ ಸೇನೆ ಪ್ರತಿಭಟನೆಗೆ ಇಳಿದಿವೆ. ‘ಬಿಗ್ ಬಾಸ್’ ಮನೆಯಲ್ಲಿ ಅಸ್ಪೃಶ್ಯತೆ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರ ಕೋಟೂರು ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಸೇನೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ.

 

 

ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೆ ಮಾತನಾಡಿಕೊಂಡು ತನ್ನದೇ ಲಿಮಿಟೆಡ್‌ ಪ್ರಪಂಚ ಕಾಣುತ್ತಿರುವ ದೀಪಿಕಾ ದಾಸ್‌ಗೆ ಮೊದಲಿನಿಂದಲೂ ಚೈತ್ರಾ ಕೋಟೂರ್‌ ಅಂದ್ರೆ ಅಷ್ಟಕ್ಕಷ್ಟೇ. ಅದಕ್ಕೆ ಚೈತ್ರಾ ‘ದೀಪಿಕಾ ದಾಸ್ ಎಲ್ಲರಿಗೂ ತಿನ್ನಿಸುತ್ತಾರೆ. ತಬ್ಬಿಕೊಳ್ಳುತ್ತಾರೆ. ಮುತ್ತು ಕೊಡುತ್ತಾರೆ ಆದರೆ ನನ್ನ ಮಾತ್ರ ಮುಟ್ಟಲ್ಲ. ಏನು untouchable ಆ ನಾವು? ಅಸ್ಪೃಶ್ಯರಾ ನಾವು? ಎಂದು ಹರೀಶ್‌ ರಾಜ್‌ ಬಳಿ ಚರ್ಚಿಸುತ್ತಾ ನಗುತ್ತಾರೆ.

ಅಸ್ಪೃಶ್ಯತೆ ಬಗ್ಗೆ ಕೋಟೂರು ಹೇಳಿದ ಮಾತಿಗೆ ಬೀದರ್ ಜಿಲ್ಲೆಯ ಅಂಬೇಡ್ಕರ್ ಸೇನೆ ಹೋರಾಟಕ್ಕೆ ಕರೆ ನೀಡಿದೆ. ಹಾಗೂ ನವೆಂಬರ್ 9 ರಂದು ಬಿಡದಿಯಲ್ಲಿ ಇರುವ ಬಿಗ್ ಬಾಸ್‌ ಮನೆಯ ಮುಂದೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಅಷ್ಟೇ ಅಲ್ಲದೆ ನಿನ್ನೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿರುವ ಕೆಲವು ದಲಿತ ಸಂಘಟನೆಗಳು, ಹೇಳಿಕೆ ಬಗ್ಗೆ ಚೈತ್ರಾ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.

ಅಸ್ಪೃಶ್ಯತೆ ಬಗೆಗಿನ ಮಾತುಗಳು ಆಕೆಯ ಕೀಳು ಮನಸ್ಥಿತಿಯ ಪ್ರತಿರೂಪ ಎಂದು ನೆಟ್ಟಿಗರೊಬ್ಬರು ಚೈತ್ರ ಕೋಟೂರುಗೆ ಛೀಮಾರಿ ಹಾಕಿದ್ದಾರೆ. ”ದೊಡ್ಡ ಬರಹಗಾರ್ತಿ ಆಗಿ, ನಟಿಯಾಗಿ ಆಕೆ ಈ ಮಾತು ಹೇಳಬಾರದಿತ್ತು. ಹೇಳಿದ ಮೇಲೆ ಸಂವೇದನಾಶೀಲ ಬರಹಗಾರ್ತಿಗೆ ಸ್ವಲ್ಪ ಅಳುಕಾಗಬೇಕಿತ್ತು. ತನ್ನ ಬಗ್ಗೆ ನಾಚಿಕೆಯಾಗಬೇಕಿತ್ತು” ಎಂಬುದು ದಿವಾಕರ್ ಆಜಾದ್ ಎನ್ನುವವರು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top