fbpx
ಸಮಾಚಾರ

ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಖರ್ಚಾಗ್ತಿದ್ದ ಹಣವನ್ನು ಸೇನೆಗೆ ನೀಡಲು ಮುಂದಾದ ಗಂಗೂಲಿ

ಮಾಜಿ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಉತ್ಸಾಹ, ಚುರುಕುನಿಂದ ಕಾರ್ಯ ನಿರ್ವಹಿಸುತ್ತಿದ್ದು, ಅನೇಕ ಸುಧಾರಣೆಗಳಿಗೆ ಮುಂದಾಗಿದ್ದಾರೆ. ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಕೋಟ್ಯಾಂತರ ರೂಪಾಯಿ ಸುಮ್ಮನೆ ಖರ್ಚಾಗ್ತಿದೆ ಎಂದು ಚಿಂತನೆ ನಡೆಸಿರುವ ಬಿಸಿಸಿಐ ಇದೀಗ ಆ ಕಾರ್ಯಕ್ರಮವನ್ನು ರದ್ದುಪಡಿಸಲು ನಿರ್ಧರಿಸಿದೆಯಂತೆ.

ಐಪಿಎಲ್ ಉದ್ಘಾಟನೆ ಹಣವನ್ನು ಪುಲ್ವಾಮಾ ದಾಳಿಯಿಂದ ಹುತಾತ್ಮರಾದ 40ಕ್ಕೂ ಹೆಚ್ಚು CRPF ಯೋಧರಿಗೆ ನೀಡಲಾಗುವುದು ಎಂದು ಬಿಸಿಸಿಐ ಹೇಳಿದೆ. ಸುಪ್ರೀಂ ಕೋರ್ಟ್ ನೇಮಿಸಿದ ಬಿಸಿಸಿಐ ಆಡಳಿತ ಸಮಿತಿ ಹಾಗೂ ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಅಧಿಕಾರಿಗಳು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಬಿಸಿಸಿಐನ ಆಡಳಿತ ಅಧಿಕಾರಿಗಳ ಮುಖ್ಯಸ್ಥ ವಿನೋದ್ ರಾಯ್ ಪ್ರತಿ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಅದ್ಧೂರಿಯಾಗಿ ಮಾಡುವುದರಿಂದ ಸುಮ್ಮನೆ ದುಡ್ಡು ವ್ಯರ್ಥವಾಗುತ್ತಿದೆ. ಯಾವ ಕ್ರೀಡಾಭಿಮಾನಿಯು ಸಹ ಈ ಕಾರ್ಯಕ್ರಮವನ್ನು ಇಷ್ಟಪಡುತ್ತಿಲ್ಲ. ಇದಕ್ಕೆ ಸುಮ್ಮನೇ ಅಪಾರ ಪ್ರಮಾಣದ ಹಣವನ್ನು ಖರ್ಚುಮಾಡುವ ಬದಲಿಗೆ ಈ ಹಣವನ್ನು ಸಮಾಜಕ್ಕೆ ಒಳ್ಳೆಯದಾಗುವ ಕೆಲಸಕ್ಕೆ ಉಪಯೋಗಿಸಬಹುದು. ಆದ್ದರಿಂದ ಈ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಬಾರದು ಎಂದು ನಾವು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು

2019ನೇ ಸಾಲಿನಲ್ಲೂ ಐಪಿಎಲ್ ಉದ್ಭಾಟನಾ ಸಮಾರಂಭ ನಡೆದಿರಲಿಲ್ಲ. ಈ ನಿಧಿಯನ್ನು ಪುಲ್ವಾಮಾದಲ್ಲಿ ವೀರ ಹುತಾತ್ಮ ಯೋಧರ ಕುಟುಂಬಗಳ ಕಲಾಣ್ಯಕ್ಕಾಗಿ ನೀಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top