fbpx
ಸಮಾಚಾರ

ಹಾಲಿವುಡ್ ‘ಟರ್ಮಿನೇಟರ್’ ಚಿತ್ರದ ಕನ್ನಡ ಅವತರಣಿಕೆಗೆ ಸಾಥ್ ನೀಡಿದ ಕಿಚ್ಚ ಸುದೀಪ್!

ಹಾಲಿವುಡ್ ನ ಬಹು ನಿರೀಕ್ಷೆಯ ‘ಟರ್ಮಿನೇಟರ್: ಡಾರ್ಕ್ ಫೇಟ್’ ಸಿನಿಮಾ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರಲು ಸಜ್ಜಾಗಿದೆ. ಹಾಲಿವುಡ್ ನ ಖ್ಯಾತ ನಟ ಆಕ್ಷನ್ ಹೀರೋ ಅರ್ನಾಲ್ಡ್ ಅಭಿನಯದ ‘ಟರ್ಮಿನೇಟರ್ ಡಾರ್ಕ್ ಫೇಟ್’ ಕನ್ನಡದಲ್ಲಿ ಡಬ್ ಆಗಿರುವ ಚಿತ್ರಕ್ಕೆ ಸುದೀಪ್ ಸಾಥ್ ನಾಡಿದ್ದಾರೆ.

 

 

ಅರ್ನಾಲ್ಡ್ ಕನ್ನಡ ಮಾತನಾಡಿರುವ ಟ್ರೈಲರ್ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡು, ವಿಡಿಯೋ ಮಾಡಿರುವ ಸುದೀಪ್ “ಅರ್ನಾಲ್ಡ್ ದೊಡ್ಡ ಆಕ್ಷನ್ ಹೀರೋಗಳಲ್ಲಿ ಒಬ್ಬರು ಮತ್ತು ನಾನು ಅವರ ಅಭಿಮಾನಿ ಕೂಡ ಹೌದು. ಟರ್ಮಿನೇಟರ್ ಫ್ರ್ಯಾಂಚೈಸ್ ನನ್ನಲ್ಲಿರುವ ಅಭಿಮಾನಿಯನ್ನು ರೋಮಾಂಚನಗೊಳಿಸಿದೆ. ಫಾಕ್ಸ್‌ಸ್ಟೂಡಿಯಸ್ ಗಾಗಿ ಕನ್ನಡ ಟ್ರೈಲರ್ ಅನ್ನು ಬಿಡುಗಡೆ ಮಾಡಲು ನನಗೆ ಸಂತೋಷವಾಗಿದೆ” ಎಂದು ಹೇಳುತ್ತ ಟ್ರೈಲರ್ ರಿಲೀಸ್ ಮಾಡಿದ್ದಾರೆ.

ಅಂದಹಾಗೆ ಸೈನ್ಸ್ ಫಿಕ್ಷನ್ ಸಿನಿಮಾ ಇದಾಗಿದ್ದು ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ನವೆಂಬರ್ 1 ಕ್ಕೆ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಇನ್ನು ಕಿಚ್ಚ ಸಲ್ಮಾನ್ ನಟನೆಯ ದಬಾಂಗ್-3 ಸಿನಿಮಾ ಕೂಡ ಕನ್ನಡದಲ್ಲಿ ಡಬ್​ ಆಗಿದ್ದು ಡಿಸೆಂಬರ್​​ನಲ್ಲಿ ತೆರೆಕಾಣಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top