fbpx
ಸಮಾಚಾರ

ಮದುವೆ ನಂತರ ಮತ್ತೆ ಚಿತ್ರರಂಗಕ್ಕೆ ಬಂದ್ರು ನಿಧಿ ಸುಬ್ಬಯ್ಯ!

ಮದುವೆಯಾದ ನಂತರ ಸಂಸಾರ ತಾಪತ್ರಗಳಲ್ಲಿ ಕಳೆದೇ ಹೋದವಳಂತೆ ಚಿತ್ರ ರಂಗದಿಂದ ಕಣ್ಮರೆಯಾಗಿದ್ದಾಕೆ ಪಂಚರಂಗಿ ಬೆಡಗಿ ನಿಧಿ ಸುಬ್ಬಯ್ಯ. ತಮ್ಮಿಷ್ಟದ ತಾರೆ ಇನ್ನು ಮುಂದೆ ತೆರೆ ಮೇಲೆ ಕಾಣಿಸಿಕೊಳ್ಳೋದೇ ಇಲ್ಲವೇನೋ ಎಂಬ ಭಯ ಹೊಂದಿದ್ದ ನಿಧಿ ಅಭಿಮಾನಿಗಳೆಲ್ಲ ಸದ್ಯ ಕೊಂಚ ನಿರಾಳವಾಗಿದ್ದಾರೆ.

 

 

ಹೌದು, ಪಂಚರಂಗಿ ಚೆಲುವೆ, ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಚಂದನವನಕ್ಕೆ ಮತ್ತೆ ಬಂದಿದ್ದಾರೆ.ಮೂರು ವರ್ಷಗಳ ಗ್ಯಾಪ್ ನಂತರ ಶಿವರಾಜ್ ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಪಿ. ವಾಸು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಿಧಿಗೆ ಒಂದು ಇಂಪಾರ್ಟೆಂಟ್ ಪಾತ್ರವಿದೆಯಂತೆ.

‘ನಾನು ನಟನೆ ಕಲಿತಿರುವುದು, ಗುರುತಿಸಿಕೊಂಡಿದ್ದು ಕನ್ನಡದಲ್ಲಿ. ಇದೀಗ ಈ ಸಿನಿಮಾದಲ್ಲಿ ನಟಿಸುವ ಮೂಲಕ ನಟನೆಗೆ ಮರಳಿರುವುದು ಸಖತ್ ಖುಷಿ ನೀಡಿದೆ. ತವರು ಮನೆಗೆ ಬಂದಂತೆ ಅನಿಸುತ್ತಿದೆ. ಇದು ನನ್ನ ಕಮ್ ಬ್ಯಾಕ್ ಸಿನಿಮಾವಲ್ಲ. ಸ್ಟೇಬ್ಯಾಕ್ ಸಿನಿಮಾ. ಇನ್ನುಮುಂದೆ ಇಲ್ಲೇ ಇರಬೇಕು ಎಂದು ಡಿಸೈಡ್ ಮಾಡಿದ್ದೀನಿ. ಪಿ. ವಾಸು ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದು ಒಳ್ಳೆಯ ಅನುಭವಗಳನ್ನು ನೀಡಿದೆ.’

“ಇದೊಂಥರಾ ಪುನಃ ನಾನು ನನ್ನ “ತವರು ಮನೆ’ಗೆ ಬಂದಂತಹ ಖುಷಿ. ಇನ್ನು ಮುಂದೆ ಸಿನಿಮಾ ನಟನೆ ಕಂಟಿನ್ಯೂ ಮಾಡ್ತೀನಿ. ಸಾಯೋವರೆಗೂ ಆ್ಯಕ್ಟ್ ಮಾಡ್ತಾ ಇರಬೇಕು. ನಾನೂ ಸಿನಿಮಾರಂಗಕ್ಕೆ ಬಂದು 50 ವರ್ಷ ಆಗೋಯ್ತು ಅಂತ ಹೇಳಿಕೊಳ್ಳಬೇಕು. ಅಲ್ಲಿಯವರೆಗೂ ನಟಿಸುವ ಆಸೆ, ಕನಸು ಇದೆ” ಎನ್ನುತ್ತಾರೆ ನಿಧಿ ಸುಬ್ಬಯ್ಯ.

ಅಂದಹಾಗೆ 2017 ರಲ್ಲಿ ‘5G’ ಎಂಬ ಕನ್ನಡ ಸಿನಿಮಾ ಮಾಡಿದ್ದ ನಿಧಿ ಅದೇ ವರ್ಷ ಒಂದು ಹಿಂದಿ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಿದ್ದರು. ಆ ಬಳಿಕ ಮದುವೆಯಾದ ನಿಧಿ ಎರಡು ವರ್ಷ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top