fbpx
ಸಮಾಚಾರ

2ನೇ ವಾರ ಬಿಗ್​ಬಾಸ್​ ಮನೆಯಿಂದ ಹೊರ ಹೋಗಲು ಬರೋಬ್ಬರಿ ಆರು ಜನ ನಾಮಿನೇಟ್: ಯಾರ‍್ಯಾರು ಗೊತ್ತಾ?

ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 7ನೇ ಸೀಸನ್’ಗೆ ಎಂಟ್ರಿ ಕೊಟ್ಟಿದ್ದ ಒಟ್ಟು 18 ಮಂದಿ ಪೈಕಿ ಈಗಾಗಲೇ ಅಧಿಕೃತವಾಗಿ ಮನೆಯ ಮೊದಲ ವಾರದ ಎಲಿಮಿನೇಷನ್ ಆಗಿದ್ದು ಗುರುಲಿಂಗ ಸ್ವಾಮಿಗಳು ಎಲಿಮಿನೇಟ್ ಆಗಿದ್ದಾರೆ. ಅಂತೆಯೇ 2ನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಬರೋಬ್ಬರಿ ಮತ್ತೆ ಆರು ಮಂದಿ ನಾಮಿನೇಟ್ ಆಗುವ ಮೂಲಕ ಕುತೂಹಲ ಕೆರಳಿಸಿದೆ.

 

 

ಬಿಗ್ ಬಾಸ್ ಮನೆಯಿಂದ ಈವಾರ ಹೊರಗಡೆ ಹೋಗಲು ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಬರೋಬ್ಬರಿ 6 ಜನ ಸ್ಪರ್ದಿಗಳು ನಾಮಿನೇಟ್ ಆಗಿದ್ದಾರೆ.. ಮನೆಯ ಎಲ್ಲಾ ಸದಸ್ಯರು ವೋಟಿಂಗ್ ಮೂಲಕ 5 ಜನ ಸ್ಪರ್ದಿಗಳನ್ನು ನಾಮಿನೇಟ್ ಮಾಡಿದರೆ, ‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋಗುವ ಮುನ್ನ ಗುರುಲಿಂಗ ಸ್ವಾಮೀಜಿ ಅವರಿಗೆ ವಿಶೇಷ ಅಧಿಕಾರ ಲಭಿಸಿತ್ತು. ಅದರ ಅನ್ವಯ ಚಂದನ್ ಆಚಾರ್ ರನ್ನ ಗುರುಲಿಂಗ ಸ್ವಾಮೀಜಿ ಡೈರೆಕ್ಟಾಗಿ ನಾಮಿನೇಟ್ ಮಾಡಿದರು.

ಮನೆಯ ಸದಸ್ಯರ ಆಯ್ಕೆಯ ಅನುಸಾರ 1.ಚೈತ್ರ ವಾಸುದೇವನ್, 2.ಚೈತ್ರ ಕೊಟ್ಟೂರ್, 3.ಸುಜಾತಾ, 4.ದೀಪಿಕಾ ದಾಸ್, 5.ಚಂದನ್ ಆಚಾರ್ ಮತ್ತು 6.ಪ್ರಿಯಾಂಕಾ ಡೇಂಜರ್ ಜೋನ್ ನಲ್ಲಿದ್ದಾರೆ. ಸೇರಿ ಐದು ಮಂದಿ ನಾಮಿನೇಟ್ ಆದರು., ಅಲ್ಲಿಗೆ ನೇರ ನಾಮಿನೇಟ್ ಆದ ಚಂದನ್ ಆಚಾರ್ ಅವರನ್ನೂ ಸೇರಿ ಮೊದಲ ವಾರ ಮನೆಯಿಂದ ಎಲಿಮಿನೇಟ್ ಆಗಲು ಒಟ್ಟು ಆರು ಜನರು ನಾಮಿನೇಟ್ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top