fbpx
ಸಮಾಚಾರ

ಮುಂದಿನ ತಿಂಗಳು ನಟ ರಿಷಿ ಮದುವೆ: ಹುಡುಗಿ ಯಾರು ಗೊತ್ತಾ?

ಸ್ಯಾಂಡಲ್‍ವುಡ್ ನಟ ರಿಷಿ ಮುಂದಿನ ತಿಂಗಳು ಸಾಂಸಾರಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕಳೆದ ಏಪ್ರಿಲ್‍ನಲ್ಲಿ ತಮ್ಮ ಬಹುಕಾಲದ ಗೆಳತಿ ಸ್ವಾತಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಿಷಿ ನವೆಂಬರ್ 10ರಂದು ರಿಷಿ ಅವರನ್ನು ಮದುವೆ ಆಗಲಿದ್ದಾರೆ ಹೇಳಲಾಗುತ್ತಿದೆ.

 

 

ಸ್ವಾತಿ ಹಾಗೂ ರಿಷಿ ಮನೆಯವರು ಈ ಮೊದಲೇ ಪರಿಚಯದವರಾಗಿದ್ದು, ಎರಡು ಫ್ಯಾಮಿಲಿಗಳ ಹಿರಿಯರ ಮೂಲಕ ಈ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಚೆನ್ನೈನಲ್ಲಿ ಹಸೆಮಣೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬದವರಿಗೆ ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ನಿಶ್ಚಿತಾರ್ಥ ಕೂಡ ಸರಳವಾಗಿ ಮಾಡಿಕೊಂಡಿದ್ದರು ರಿಷಿ ಮತ್ತು ಸ್ವಾತಿ.

ರಿಷಿ ಮತ್ತು ಸ್ವಾತಿ ಮದುವೆ ಚೆನ್ನೈನಲ್ಲಿ ಮಾಡಿಕೊಂಡರೆ, ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದಾರೆ. ಮದುವೆ ಆದ 10 ದಿನಗಳ ನಂತರ ಚಿತ್ರರಂಗದ ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆಯನ್ನು ಆಯೋಜಿಸುತ್ತಾರೆ ಎನ್ನಲಾಗಿದೆ. ಈಗಾಗಲೇ ರಿಷಿ ಮನೆಯಲ್ಲಿ ಮದುವೆ ತಯಾರಿ ಶುರುವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top