fbpx
ಸಮಾಚಾರ

ಬಾಲಿವುಡ್ ನಟ ಸಲ್ಮಾನ್ ಖಾನ್ ಬಾಡಿಗಾರ್ಡ್ ತಿಂಗಳ ಸಂಬಳ ಇಷ್ಟೊಂದಾ!

ಬಾಲಿವುಡ್ ಬ್ಯಾಡ್ ಬಾಯ್ ಎಂದೇ ಹೆಸರು ಉಳಿಸಿಕೊಂಡಿರುವ ಸಲ್ಮಾನ್ ಖಾನ್ ಅಪರಾಧಿ ಎಂದು ಜೋಧ್‌ಪುರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ತೀರ್ಪು ಪ್ರಕಟಿಸಿದೆ. 20 ವರ್ಷಗಳ ಹಿಂದೆ ನಟ ಸಲ್ಮಾನ್ ಖಾನ್ ಹಾಗೂ ಇತರೆ ನಟರ ವಿರುದ್ಧ ದಾಖಲಾಗಿದ್ದ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪನ್ನು ರಾಜಸ್ಥಾನದ ಜೋಧಪುರ ನ್ಯಾಯಾಲಯ ಪ್ರಕಟಿಸಿದ್ದು ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 51ರ ಅಡಿ ಸಲ್ಮಾನ್​​ಗೆ ಶಿಕ್ಷೆಯ ಪ್ರಕಟವಾಗಿದೆ.ಅವರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ 5 ವರ್ಷಗಳ ಕಾಲ ಜೈಲು ಶಿಕ್ಷೆ ಜೊತೆಗೆ 1oಸಾವಿರ ರೂ.ದಂಡ ವಿಧಿಸಲಾಗಿದೆ.

 

 

ಈ ನಡುವೆ ಸಲ್ಮಾನ್ ಖಾನ್ ಅವರ ಪರ್ಸನಲ್ ಬಾಡಿ ಗಾರ್ಡ್ ಆಗಿಸುವ ಶೇರಾ ಎಂಬುವವರ ಬಗೆಗಿನ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪರ್ಸನಲ್ ಸೆಕ್ಯೂರಿಟಿ ಸಂಸ್ಥೆಯೊಂದು ಶೇರಾ ಅವರಿಗೆ ಉತ್ತಮ ಬಾಡಿಗಾರ್ಡ್ ಪ್ರಶಸ್ತಿ ನೀಡುವ ಮೂಲಕ ಗೌರವ ನೀಡಿದೆ. ಶೇರಾ ಸುಮಾರು 20 ವರ್ಷಗಳಿಂದ ಸಲ್ಮಾನ್ ಖಾನ ಅವರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಸಿಖ್ ಮನೆತನದಿಂದ ಬಂದಿರುವ ಶೇರಾ ರವರ ಮೂಲ ಹೆಸರು ಗುರ್ಮಿತ್ ಆಗಿದೆ. 1995ರಲ್ಲಿ ಸಲ್ಮಾನ್ ಖಾನ್ ಅವರಿಗೆ ಬಾಡಿ ಗಾರ್ಡ್ ಆಗಿ ನೇಮಕವಾದ ಶೇರಾ ತಮ್ಮ ಪ್ರಾಮಾಣಿಕ ಸೇವೆಯನ್ನು ಸಲ್ಮಾನ್ ಖಾನ್ ಅವರಿಗೆ ಶೇರಾ ಒದಗಿಸಿದ್ದಾರೆ.

 

ಶೇರಾ ಅವರ ಅಮೋಘ 20 ವರ್ಷಗಳ ಸೇವೆಗಾಗಿ ಪರ್ಸನಲ್ ಸೆಕ್ಯೂರಿಟಿ ಸಂಸ್ಥೆ ಈ ಪ್ರಶಸ್ತಿ ನೀಡಿದೆ. ನಟಿ ಮಾಧುರಿ ದೀಕ್ಷಿತ್ ಈ ಪ್ರಶಸ್ತಿ ನೀಡಿದ್ದಾರೆ.

 

 

ಮೂಲಗಳ ಪ್ರಕಾರ ಸಲ್ಮಾನ್ ಖಾನ್ ತನ್ನ ನೆಚ್ಚಿನ ಬಾಡಿ ಗಾರ್ಡ್ ಶೇರಾಗೆ ಪ್ರತಿ ತಿಂಗಳು 15 ಲಕ್ಷ ರೂಪಾಯಿ ಸಂಬಳ ನೀಡ್ತಾರೆ. ವರ್ಷಕ್ಕೆ ಸುಮಾರು 2 ಕೋಟಿ ರೂಪಾಯಿ ಸಂಬಳ ಪಡೆಯುತ್ತಾರೆ ಶೇರಾ. ಬಾಲಿವುಡ್ ಚಿತ್ರರಂಗದ ಯಾವ ಸ್ಟಾರ್ ಗಳ ಅಂಗರಕ್ಷಕರಿಗೂ ಇಷ್ಟು ದೊಡ್ಡ ಸಂಬಳ ಸಂಬಳ ಸಿಗುವುದಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top