fbpx
ಸಮಾಚಾರ

ಶೃತಿ ಹರಿಹರನ್ ಮಗಳಿಗೆ ನಾಮಕರಣ ಸಂಭ್ರಮ: ಮಗಳಿಗೆ ಇಟ್ಟ ಹೆಸರೇನು?

ನಾತಿಚರಾಮಿ ಚಿತ್ರದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ಶ್ರುತಿ ಹರಿಹರನ್ ಸದ್ಯ ತಾಯಿ ಆಗಿದ್ದು ತಮ್ಮ ಮುದ್ದು ಮಗಳ ಲಾಲನೆ ಪಾಲನೆಯಲ್ಲಿ ಮಗ್ನರಾಗಿದ್ದಾರೆ. ಇದೀಗ ಶ್ರುತಿ ಹರಿಹರನ್ ತಮ್ಮ ಪುತ್ರಿಯ ನಾಮಕರಣವನ್ನು ಸರಳ ಮತ್ತು ಸುಂದರವಾಗಿ ನೆರವೇರಿಸಿದಾರೆ.

ಪತಿ ರಾಮ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ನಾಮಕರಣದ ಫೋಟೋ ಹಂಚಿಕೊಂಡಿದ್ದಾರೆ. ’28 ದಿನಗಳ ಹಿಂದೆ ನಮ್ಮಿಬ್ಬರ ಬಾಳಿಗೊಂದು ಉಡುಗೊರೆ ದಕ್ಕಿತ್ತು, ಅದರ ಸಂಭ್ರಮಾಚರಣೆ ಕುಟುಂಬದವರು ಹಾಗೂ ಪ್ರೀತಿಪಾತ್ರರ ಜೊತೆಗೆ..’ ಅಂತಾ ಖುಷಿಯಿಂದ ಬರೆದುಕೊಂಡಿದ್ದಾರೆ. ರಾಮ್ ಅವರು ಹಂಚಿಕೊಂಡಿರುವ ಫೋಟೋದಲ್ಲಿ ರಾಮ್ ತಮ್ಮ ಪುಟಾಣಿ ಕಂದನನ್ನ ಎತ್ತಿಕೊಂಡಿದ್ರೆ, ಪಕ್ಕದಲ್ಲಿ ಅಲಂಕಾರಗೊಂಡು ಶೃತಿ ಕೂತಿದ್ದಾರೆ. ಇವರ ಜೊತೆಗೆ ಕುಟುಂಬದವರು ಜೊತೆಗಿದ್ದಾರೆ.

ಮಗಳಿಗೆ ಇಟ್ಟ ಹೆಸರೇನು?
ಶೃತಿ ಹರಿಹರನ್ ಮಗಳ ಹೆಸರೇನು, ಎಂಬ ವಿಚಾರವನ್ನು ದಂಪತಿ ಬಿಟ್ಟುಕೊಟ್ಟಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಮಗಳಿಗೆ ‘ಜಾನಕಿ’ ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ.

ಅಂದಹಾಗೆ ಶ್ರುತಿ ಹರಿಹರನ್ ಅವರು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈವರೆಗೂ ಮಗಳ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top