fbpx
ಸಮಾಚಾರ

ಎರಡೂ ಕೈಗಳಿಲ್ಲದೆ ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ಕಿರಣ ಫಕ್ಕೀರಪ್ಪಾ ಅವರಿಗೆ ಪ್ರೊಸ್ಥೆಟಿಕ್ಸ್ ಕೈ ಜೋಡಣೆಗೆ ಸಂಪೂರ್ಣ ನೆರವು ನೀಡಲಿರುವ ಸಂಸದ ಜಿಸಿ ಚಂದ್ರಶೇಖರ್

ಎರಡೂ ಕೈಗಳಿಲ್ಲದೆ ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ಬೈಲಹೊಂಗಲ ತಾಲೂಕಿನ ಹನಮರಟ್ಟಿ ಗ್ರಾಮದ ನಿವಾಸಿ, 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕಿರಣ ಫಕ್ಕೀರಪ್ಪಾ ಅವರಿಗೆ ಕೃತಕ ಕೈ ಜೋಡಣೆಗೆ ಅಗತ್ಯವಾಗುವ ಧನಸಹಾಯ ಮಾಡಿದ್ದಾರೆ.

ಕಿರಣ ಫಕೀರಪ್ಪ ಕ್ಯಾಮನಕೋಲ ಎಂಬ ಈ ಬಾಲಕ ಎಂಬ ಬಾಲಕನಿಗೆ ಎರಡೂ ಕೈ ಇಲ್ಲ. ಹೀಗಿದ್ದರೂ ತನ್ನ ಎಲ್ಲಾ ಕೆಲಸವನ್ನು ತಾನೇ ಮಾಡಿಕೊಳ್ಳುವ ಮೂಲಕ ಸ್ವಾವಲಂಬನೆ ಬದುಕನ್ನು ನಡೆಸುತ್ತಿದ್ದಾನೆ. ಹುಟ್ಟಿನಿಂದಲೇ ಎರಡೂ ಕೈಗಳನ್ನು ಕಳೆದುಕೊಂಡಿರುವ ಕಿರಣ್ ಗೆ ಕೃತಕ ಕೈ ಜೋಡಿಸಲು ಸಹಾಯ ಮಾಡುವಂತೆ ಸುವರ್ಣ ನ್ಯೂಸ್ ವಿಶೇಷ ವರದಿಯನ್ನು ಪ್ರಸಾರ ಮಾಡಿತ್ತು. ‘ಕೈಯಿಲ್ಲದಿದ್ದರು ಸ್ವಾವಲಂಬಿಯಾಗಿ ಬದುಕುತ್ತಿರುವ ಬಾಲಕ’ ಎಂಬ ಶೀರ್ಷಿಕೆಯಡಿಯಲ್ಲಿ ಸುವರ್ಣ ನ್ಯೂಸ್ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿತ್ತು.

 

 

ಈ ವರದಿಯು ಸಂಸದ ಜಿಸಿ ಚಂದ್ರಶೇಖರ್ ಅವರ ಗಮನಕ್ಕೆ ಬಂದಿದ್ದು ತಕ್ಷಣವೇ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸದರ ಪರಿಹಾರ ನಿಧಿಯಿಂದ ಮಗುವಿನ ಸಂಪೂರ್ಣ ಚಿಕಿತ್ಸೆಯ ವೆಚ್ಚ ಹಾಗು ಕೃತಕ ಕೈಜೋಡಿಸುವಿಕೆ ಪರಿಕರಗಳ ವೆಚ್ಚವನ್ನು ಭರಿಸಲು ಜಿಸಿ ಚಂದ್ರಶೇಖರ್ ಮುಂದಾಗಿದ್ದಾರೆ.

click on the link below to read more about kiran
ಇದನ್ನೂ ಓದಿ: ಎರಡೂ ಕೈಗಳಿಲ್ಲದಿದ್ದರೂ ಸ್ವಾವಲಂಬಿಯಾಗಿ ಬದುಕುತ್ತಿರುವ ಪುಟ್ಟ ಬಾಲಕ.

 

ಈಗಾಗಲೇ ಜಿಸಿ ಚಂದ್ರಶೇಖರ್ ಅವರ ತಂಡ ಪ್ರೊಸ್ಥೆಟಿಕ್ಸ್ ಹಾಗು ಅರ್ಥೊಟಿಕ್ಸ್ ತಜ್ಞ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದು ಮೇಲ್ನೋಟಕ್ಕೆ ಮಗು ‘ಎಲ್ಬೋ ದಿಸಾರ್ಟಿಕ್ಯುಲೇಷನ್’ ಎಂಬ ಸಮಸ್ಯೆಯಿಂದ ಬಳಲುತ್ತಿದೆ ಎಂದು ವೈದ್ಯರು ತಿಳಿಸಿದ್ದಾರಂತೆ,. ಅಷ್ಟೇ ಅಲ್ಲದೆ ಮಗುವಿನ ಎಳೆಯ ಕೈಗಳಿಗೆ ಕೃತಕ ಕೈಜೋಡಿಸುವಿಕೆಗೆ ಬೇಕಾಗುವ ಪರಿಕರಗಳು ಭಾರತದಲ್ಲಿ ಲಭ್ಯವಿಲ್ಲದಿರುವುದರಿಂದ ಅವನ್ನು ಹೊರದೇಶದಿಂದ ತರಿಸುವ ಸಲುವಾಗಿಯೂ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರಂತೆ.

ಇದೀಗ ಬಾಲಕ ಕಿರಣ್ ಅವರಿಗೆ ಒಂದು ವೇಳೆ ಶಸ್ತ್ರಚಿಕಿತ್ಸೆ ನಡೆಸಿ ಕೈ ಜೋಡಿಸಿದರೆ ಯಾವ ರೀತಿ ಕಾಣಬಹುದು ಎಂಬ ಡೆಮೋ ವಿಡಿಯೋವನ್ನು ಕೂಡ ಸಂಸದ ಜಿಸಿ ಚಂದ್ರಶೇಖರ್ ಹಂಚಿಕೊಂಡಿದ್ದಾರೆ. ಕೃತಕ ಕೈ ಜೋಡಿಸಿದರೆ ಕಿರಣ್ ಕೂಡ ಎಲ್ಲಾ ಮಕ್ಕಳಂತೆ ಸುಲಭವಾಗಿ ಆಟವಾಡಬಹುದು ಕೆಲಸ ಮಾಡಬಹುದಾಗಿದೆ.

 

 

 

 

“ಬಾಲಕ ಕಿರಣ್ ಇನ್ನು 5 ನೇ ತರಗತಿ ಓದುತ್ತಿದ್ದು ಮಗುವಿನ ಭವಿಷ್ಯ ಮುಂದೆ ಉಜ್ವಲವಾಗಿ ಬೆಳಗಬೇಕು, ದೇವರ ಕೃಪೆಯಿಂದ ಆತನ ಆಶಯಗಳು ಈಡೇರಬೇಕಿದೆ, ತನ್ನ ತಂದೆಯನ್ನು ಈಗಾಗಲೇ ಕಳೆದುಕೊಂಡಿರುವ ಕಿರಣ್ ಹಿರಿಯ ಮಗನಾಗಿದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ತಾಯಿ ಹಾಗು ಪುಟ್ಟ ತಮ್ಮನ ಬಾಳಿಗೆ ನಿಲ್ಲಬೇಕಾದ ಅವಶ್ಯಕತೆಯಿದೆ. ಆದ್ದರಿಂದ ಮಗುವಿನ ಚಿಕಿತ್ಸೆ ಮಾಡಿಸಲು ನೆರವು ನೀಡಿದ್ದೇವೆ” ಎನ್ನುತ್ತಾರೆ ಸಂಸದ ಜಿಸಿ ಚಂದ್ರಶೇಖರ್.

ಒಟ್ಟಿನಲ್ಲಿ ಸಂಸದರ ಸಹಾಯದಿಂದ ಮಗುವು ಎಲ್ಲರಂತೆ ಊಟ, ಬರಹ ಮುಂತಾದ ದಿನನಿತ್ಯದ ಕೆಲಸಗಳನ್ನು ಸಲೀಸಾಗಿ ಮಾಡುವಂತೆ ಆಗಲಿ ಎಂಬುದೇ ಎಲ್ಲರ ಆಶಯ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top