fbpx
ಸಮಾಚಾರ

ಫಿಫಾ ರ‍್ಯಾಂಕಿಂಗ್​: 6 ಸ್ಥಾನಗಳ ಜಿಗಿದ ಕಂಡ ಭಾರತೀಯ ಮಹಿಳಾ ಫುಟ್ಬಾಲ್ ತಂಡ.

ಕಳೆದ ಕೆಲವು ತಿಂಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಪರಿಣಾಮ ಭಾರತ ಮಹಿಳಾ ಫುಟ್ಬಾಲ್‌ ತಂಡ ಫಿಫಾ ಬಿಡುಗಡೆ ಮಾಡಿದ ನೂತನ ರಾರ‍ಯಂಕಿಂಗ್‌ನಲ್ಲಿ 6 ಸ್ಥಾನ ಬಡ್ತಿಯೊಂದಿಗೆ 57ನೇ ಸ್ಥಾನಕ್ಕೇರಿದೆ. ಒಟ್ಟಾರೆ 1,422 ಅಂಕಗಳನ್ನು ತಂಡ ಗಳಿಸಿದೆ. 2019ರ ಮಾರ್ಚ್​ 29ರಂದು ಬಿಡುಗಡೆಯಾದ ರ‍್ಯಾಂಕಿಂಗ್​ ಪಟ್ಟಿಯಲ್ಲಿ 1,392 ಅಂಕಗಳೊಂದಿಗೆ ಏಷ್ಯಾ ಖಂಡದಲ್ಲಿ 11ನೇ ಸ್ಥಾನಕ್ಕೆ ಏರಿಕೆಯಾಗಿತ್ತು.

 

 

ಜನವರಿಯಿಂದ ತಂಡ 18 ಪಂದ್ಯಗಳನ್ನಾಡಿದ್ದು ಆ ಪೈಕಿ 12ರಲ್ಲಿ ಗೆಲುವು ಸಾಧಿಸಿದೆ. ಐದರಲ್ಲಿ ಸೋಲನುಭವಿಸಿದ್ದರೆ ಒಂದು ಪಂದ್ಯ ಡ್ರಾದಲ್ಲಿ ಕೊನೆಯಾಗಿದೆ. ಹಾಂಕಾಂಗ್, ಇಂಡೋನೇಶಿಯ ಮತ್ತು ಟರ್ಕಿಗೆ ಪ್ರವಾಸ ಕೈಗೊಂಡಿದ್ದ ಮಹಿಳಾ ತಂಡ ಎಸ್‌ಎಎಫ್‌ಎಫ್ ಚಾಂಪಿಯನ್‌ಶಿಪ್ ಮತ್ತು ಎಎಫ್‌ಸಿ ಒಲಿಂಪಿಕ್ ಎರಡನೇ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದೆ.

ಅಂದಹಾಗೆ ಈ ತಿಂಗಳ ಕೊನೆಯಲ್ಲಿ ಭಾರತೀಯ ಮಹಿಳಾ ತಂಡ ಸ್ಪೇನ್‌ನಲ್ಲಿ ಕೊಟಿಫ್ ಕಪ್‌ನಲ್ಲಿ ಆಡಲಿದೆ. ಭಾರತೀಯ ಮಹಿಳಾ ತಂಡದ ರ್ಯಾಂಕಿಂಗ್ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ತಂಡದ ಮುಖ್ಯ ತರಬೇತುದಾರ ಮೇಮೊಲ್ ರಾಕಿ ಆಟಗಾರರನ್ನು ಅಭಿನಂದಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top