fbpx
ಸಮಾಚಾರ

ಟೀಂ ಇಂಡಿಯಾ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡ ನ್ಯೂಜಿಲೆಂಡ್​​ ಆಲ್​ರೌಂಡರ್​ ಜಿಮ್ಮಿ ನೀಶಾಮ್​.

ಪ್ರಸಕ್ತ ಐಸಿಸಿ ವಿಶ್ವಕಪ್​ನ ಫೈನಲ್​ಗೆ ಭಾರತ ಪ್ರವೇಶಿಸಲಿದೆ ಎಂಬ ನಂಬಿಕೆಯಿಂದ ಭಾರತದ ಅಭಿಮಾನಿಗಳು ಫೈನಲ್​​ಗೆ ಹೆಚ್ಚು ಟಿಕೆಟ್​ಗಳನ್ನು ಖರೀದಿಸಿದ್ದರು. ಆದರೆ, ನ್ಯೂಝಿಲ್ಯಾಂಡ್ ಎದುರಿನ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಕೇವಲ 18 ರನ್​ಗಳಿಂದ ಸೋಲನುಭವಿಸಿದ್ದರಿಂದ ಟೀಂ ಇಂಡಿಯಾ ಅಭಿಮಾನಿಗಳ ಕನಸು ನುಚ್ಚು ನೂರಾಗಿದೆ. ಈ ಬಗ್ಗೆ ತಿಳಿದ ನ್ಯೂಜಿಲೆಂಡ್​ನ ಆಲ್​ರೌಂಡರ್​ ಜಿಮ್ಮಿ ನೀಶಾಮ್​ ಅವರು ಭಾರತ ಅಭಿಮಾನಿಗಳನ್ನು ವಿಶೇಷವಾಗಿ ಮನವಿ ಮಾಡಿಕೊಂಡಿದ್ದಾರೆ.

 

 

“ಪ್ರೀತಿಯ ಭಾರತೀಯ ಅಭಿಮಾನಿಗಳೇ, ಫೈನಲ್ ಪಂದ್ಯ ವೀಕ್ಷಣೆಗೆ ಬಾರದಿದಲ್ಲೀ ಅಧಿಕೃತ ಪ್ಲಾಟ್ ಫಾರಂಗಳ ಮೂಲಕ ಮರು ಮಾರಾಟ ಮಾಡಿ. ದೊಡ್ಡ ಆದಾಯ ಮಾಡಲು ಪ್ರಯತ್ನಿಸಿ ಎಂಬ ಪ್ರೇರಣೆ ಎಂಬುದು ನನ್ನಗೆ ಗೊತ್ತಿದೆ. ಆದರೆ, ಹಣ ಮಾತ್ರವಲ್ಲ, ಕ್ರಿಕೆಟ್ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಡಿ ಎಂದು ಅವರು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚಿಗೆ ಐಸಿಸಿ ಕೂಡಾ ರಿಟರ್ನ್ ನೀತಿಯನ್ನು ಜಾರಿಗೆ ತಂದಿದ್ದು, ಒಂದು ವೇಳೆ ಟಿಕೆಟ್ ಹಿಂತಿರುಗಿಸಿದರೆ ಪೂರ್ಣ ಮೊತ್ತವನ್ನು ಪಡೆಯಬಹುದಾಗಿದೆ. ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ತಪ್ಪಿಸುವ ಉದ್ದೇಶದಿಂದ ಈ ರೀತಿಯ ಸ್ವಲ್ಪ ಪ್ರಯತ್ನ ಮಾಡಿರುವುದಾಗಿ ಹಿರಿಯ ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top