fbpx
ಸಮಾಚಾರ

ಅಂದು ಪಾನಿಪುರಿ ಮಾರುತ್ತಿದ್ದ ಈ ಹುಡುಗ ಈಗ ಟೀಮ್ ಇಂಡಿಯಾ ಯಶಸ್ವಿ ಆಟಗಾರ.

ಟೆಂಟ್‌ ದಲ್ಲಿ ಮಲಗಿ, ಪಾನಿಪೂರಿ ಮಾರಾಟ ಮಾಡಿ ಇದೀಗ ಭಾರತ ಕ್ರಿಕೆಟ್ ಅಂಡರ್ 19 ತಂಡ ಸೇರಿಕೊಂಡಿರುವ ಮುಂಬೈನ ಯಶಸ್ವಿ ಜೈಸ್ವಾಲ್‌ ಅವರು ತಂಡಕ್ಕೆ ಸೇರುವ ಮೊದಲು ವಹಿಸಿದ ಶ್ರಮ ಅಷ್ಟಿಷ್ಟಲ್ಲ.

ಯಶಸ್ವಿ ಜೈಸ್ವಾಲ್‌ 11ನೇ ವಯಸ್ಸಿಗೆ ಆಟ ಪಾಠ ನಿಲ್ಲಿಸಿ ನೇರವಾಗಿ ಮುಂಬೈ ನಗರ ಸೇರಿಕೊಂಡ, ತನ್ನ ಅಂಕಲ್ ಮನೆ ಮುಂಬೈನಲ್ಲಿ ಇದ್ದರು ಕೂಡ, ಅಲ್ಲಿ ಮತ್ತೊಬ್ಬರಿಗೆ ಮಲಗಲು ಜಾಗವಿಲ್ಲ ಈ ಕಾರಣದಿಂದ ಆತ ಬಸ್ ಸ್ಟಾಂಡ್ ನಲ್ಲಿಯೇ ಮಲಗಿ ಜೀವನ ನಡೆಸುತ್ತಿದ್ದ. ಅಲ್ಲೇ ಒಂದು ಡೈರಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಕೆಲಸದ ಜೊತೆ ಕ್ರಿಕೆಟ್ ಪ್ರಾಕ್ಟೀಸ್ ಕೂಡ ಮಾಡುತ್ತಿದ್ದ.

ಹೀಗೆ ಒಂದು ದಿನ ಕ್ರಿಕೆಟ್ ಮ್ಯಾಚ್ ಆಡಲು ರಜೆ ಕೇಳಿದಾಗ ಮಾಲೀಕ ಈತನನ್ನು ಕೆಲಸದಿಂದಲೇ ಕಿತ್ತು ಹಾಕಿದ. ಬಳಿಕ ಆತ ಕ್ರಿಕೆಟ್ ಕ್ಲಬ್ ಸೇರಲು ಬಯಸಿದ ಆದರೆ ಅವನ ಬಳಿ ಅಷ್ಟೊಂದು ದುಡ್ಡು ಇರಲಿಲ್ಲ. ಆಗ ಅವನು ಅಲ್ಲೇ ಕ್ರಿಕೆಟ್ ಮೈದಾನದ ಹೊರಗೆ ಪಾನಿ ಪುರಿ ಮಾರಿ ಕ್ಲಬ್ ಸೇರಿಕೊಂಡ. ಪಾನಿ ಪೂರಿ ಅಂಗಡಿ ಮೈದಾನದ ಹೊರಗೆ ಇದ್ದರಿಂದ ಕ್ಲಬ್ ನಲ್ಲಿ ಆಡುತ್ತಿದ್ದ ಸ್ನೇಹಿತರು ಕೂಡ ಅಲ್ಲಿಗೆ ಬರುತ್ತಿದ್ದರು. ಇದರಿಂದ ಆತ ಕೆಲವೊಮ್ಮೆ ಮುಜುಗುರ ಅನುಭವಿಸಿದ್ದನಂತೆ, ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ತನ್ನ ಆಟ ಮುಂದುವರೆಸಿದ್ದ.

ಕ್ಲಬ್ ನಲ್ಲಿ ಉತ್ತಮ ಆಟ ಪ್ರದರ್ಶನ ಮಾಡಿ ಈಗ ಅಂಡರ್ 19 ಟೀಮ್ ಗೆ ಆಯ್ಕೆ ಆಗಿದ್ದಾನೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಭಾರತ ತಂಡದ ಜೊತೆ ಶ್ರೀಲಂಕಾ ಪ್ರವಾಸ ಕೈಗೊಂಡ ಯಶಸ್ವಿ ಜೈಸ್ವಾಲ್‌ಗೆ ಸಚಿನ್ ತೆಂಡೂಲ್ಕರ್ ದಿಢೀರ್ ಆಮಂತ್ರಣ ನೀಡಿದ್ದರು. ತಮ್ಮ ಮನೆಗೆ ಆಹ್ವಾನಿಸಿದ ಸಚಿನ್, ಜೈಸ್ವಾಲ್‌ಗೆ ಸ್ವತಃ ತಾವೇ ಸಹಿ ಹಾಕಿದ ಬ್ಯಾಟೊಂದನ್ನ ಉಡುಗೊರೆಯಾಗಿ ನೀಡಿ ಉಪಯುಕ್ತ ಸಲಹೆ ನೀಡಿದ್ದಾರೆ.

ಕಳೆದ ವರ್ಷ ನಡೆದ ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಮ್ಯಾನ್ ಆಫ್ ದಿ ಸಿರೀಸ್ ಗೆದ್ದ ಯಶಸ್ವಿ ಜೈಸ್ವಾಲ್ ಭಾರತ ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾನೆ.ಜೀವನ ನಿರ್ವಹಣೆಗಾಗಿ ಮುಂಬೈ ಕ್ರಿಕೆಟ್ ಮೈದಾನಗಳ ಹೊರಗೆ ಪಾನಿಪುರಿ ಮಾರುತ್ತಿದ್ದ 17 ವರ್ಷದ ಬಾಲಕ ಯಶಸ್ವಿ ಜೈಸ್ವಾಲ್ ಈಗ ಭಾರತದ ಕಿರಿಯರ ತಂಡದ ಗೆಲುವಿನ ರೂವಾರಿಯಾಗಿ ಮಿಂಚಿರುವುದು ವಿಶೇಷ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top