fbpx
ಸಮಾಚಾರ

ಧೋನಿ ನಿವೃತ್ತಿ ವಿಚಾರ- ವೈರಲ್ ಆಯ್ತು ಕ್ಯಾಪ್ಟನ್ ಕೂಲ್ ನಿವೃತ್ತಿ ಬಗ್ಗೆ ಲತಾ ಮಂಗೇಶ್ಕರ್ ಮಾಡಿರುವ ಟ್ವೀಟ್.

ಟೀಂ ಇಂಡಿಯಾ ಮಾಜಿ ನಾಯಕ, ತಂಡದ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ವಿಶ್ವಕಪ್ ಟೂರ್ನಿ ಬೆನ್ನಲ್ಲೇ ನಿವೃತ್ತಿ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಮಾಜಿ ಕ್ರಿಕೆಟಿಗರು ಹಾಗೂ ಕೆಲ ದಿಗ್ಗಜ ಕ್ರಿಕೆಟಿಗರೂ ಧೋನಿ ನಿವೃತ್ತಿಗೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಭಾರತದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಧೋನಿ ಬಳಿ ಮನವಿ ಮಾಡಿದ್ದಾರೆ. ಧೋನಿ ಮುಂದೆ ದೇಶದ ಪರ ಅಡಬೇಕು ಎಂದು ಹೇಳಿದ್ದಾರೆ.

 

 

ಧೋನಿಗೆ ಬೆಂಬಲ ನೀಡಿರುವ ಲತಾ ಮಂಗೇಶ್ಕರ್ ಅವರು, “ನಮಸ್ಕಾರ ಎಂ.ಎಸ್ ಧೋನಿ ಜಿ ನೀವು ನಿವೃತ್ತಿ ಹೊಂದಲು ಬಯಸುತ್ತೀರಿ ಎಂದು ನಾನು ಕೇಳಿದ್ದೇನೆ. ದಯವಿಟ್ಟು ಆ ರೀತಿ ಯೋಚಿಸಬೇಡಿ. ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ. ನೀವು ನಿವೃತ್ತಿಯ ಬಗ್ಗೆ ಯೋಚಿಸಬಾರದು ಎಂಬುದು ನನ್ನ ವೈಯಕ್ತಿಕ ಮನವಿ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಧೋನಿ ನಿವೃತ್ತಿ ಘೋಷಿಸಬಾರದು ಎಂದು ಕ್ರಿಕೆಟ್‌ ಪ್ರಿಯರು, ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆಸಿದ್ದಾರೆ. ಡುನಾಟ್‌ ರಿಟೈರ್‌ ಧೋನಿ (#donotretiredhoni) ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top