fbpx
ಸಮಾಚಾರ

ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಡಾ.ಶಿವಣ್ಣ.

ಕನ್ನಡದ ಬಹುತೇಕ ಸ್ಟಾರ್’ಗಳು ಫೇಸ್ಬುಕ್ ಟ್ವಿಟ್ಟರ್ ನಂತಹ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯಾಗಿದ್ದಾರೆ.. ತಮ್ಮ ವಾಲ್’ಗಳಲ್ಲಿ ತಾವು ನಟಿಸುವ ಸಿನಿಮಾಗಳ ಮಾಹಿತಿಯಿಂದ ಹಿಡಿದು ವಯಕ್ತಿಕ ವಿಚಾರಗಳನ್ನೂ ತಾರೆಯರು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತ್ರ ಈವರೆಗೆ ಟ್ವಿಟರ್ ಆಗಲಿ ಅಥವಾ ಯಾವುದೇ ಸಾಮಾಜಿಕ ಜಾಲತಾಣದಲ್ಲಾಗಲಿ ಖಾತೆಯನ್ನು ಹೊಂದಿರಲಿಲ್ಲ. ಆದರೆ ಇದೀಗ ಅಧಿಕೃತವಾಗಿ ಟ್ವಿಟರ್ ಮತ್ತು ಫೇಸ್ಬುಕ್ ಅಕೌಂಟ್ ಓಪನ್ ಮಾಡಿದ್ದಾರೆ.

ಅನೇಕ ವರ್ಷಗಳಿಂದ ಪ್ರೀತಿಯ ನಟನನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗುವಂತೆ ಅಭಿಮಾನಿಗಳು ಅಹವಾಲು ಸಲ್ಲಿಸುತ್ತಲೇ ಬಂದಿದ್ದರು. ಈಗ ಅಪ್ಪು ತಮ್ಮ ಅಫಿಶಿಯಲ್ ಟ್ವಿಟರ್ ಅಕೌಂಟ್ ತೆರೆದಿದ್ದಾರೆ. ಈ ಮೂಲಕ ಕೊನೆಗೂ ಅಭಿಮಾನಿಗಳ ಬಹು ದಿನದ ಆಸೆಯನ್ನು ಈಡೇರಿಸಿದ್ದಾರೆ. ನಾಳೆ (ಜುಲೈ 12) ರಂದು ಶಿವರಾಜ್ ಕುಮಾರ್ ಹುಟ್ಟುಹಬ್ಬ ಇದ್ದು, ಈ ವಿಶೇಷ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ.

Dr Shiva Rajkumar ಶಿವಣ್ಣನ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆಗಳ ಯುಸರ್ ನೇಮ್ ಆಗಿದೆ. “ನಿಮ್ಮ ಅಭಿಮಾನಕ್ಕೆ ಚಿರಋಣಿ, ನಿಮ್ಮ ಶಿವಣ್ಣ ಈಗ ನಿಮಗೆ ಇನ್ನಷ್ಟು ಹತ್ತಿರ, ನನ್ನ ಈ ಅಧಿಕೃತ ಫೇಸ್ ಬುಕ್ ಪೇಜ್ ನ ಲೈಕ್ ಮಾಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ..

ಶಿವಣ್ಣನ ಫೇಸ್ಬುಕ್ ಖಾತೆಯ ಲಿಂಕ್: https://www.facebook.com/NimmaShivanna/

ಶಿವಣ್ಣನ ಟ್ವಿಟ್ಟರ್ ಖಾತೆಯ ಲಿಂಕ್: https://twitter.com/NimmaShivanna

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top