fbpx
ಸಮಾಚಾರ

ಬೌನ್ಸರ್ ಪೆಟ್ಟಿನಿಂದ ರಕ್ತ ಸುರಿಯುತ್ತಿದ್ದರೂ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮನಗೆದ್ದ ಆಸೀಸ್ ಆಟಗಾರ- ಭಯಾನಕ ವಿಡಿಯೋ!

ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರಿ ಅವರು ಮಾರಣಾಂತಿಕ ಬೌಲಿಂಗ್ ದಾಳಿಗೆ ಗಾಯಗೊಂಡಿರುವ ವಿಡಿಯೋ ಭಯಾನಕವಾಗಿದೆ. ಬರ್ಮಿಂಗ್ ಹ್ಯಾಮ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚರ್ ಎಸೆದ ಮಾರಕ ಚೆಂಡು ಕ್ಯಾರಿ ಮುಖಕ್ಕೆ ಬಡಿದ ಘಟನೆ ನಡೆಯಿತು. ಈ ವೇಳೆ ಕ್ಯಾರಿ ತಲೆಗೆ ಹಾಕಿದ್ದ ಹೆಲ್ಮೆಟ್ ಕಿತ್ತು ಬಂದಿತ್ತು.

 

 

 

 

ಪಂದ್ಯದ 8ನೇ ಓವರಿನ ಅಂತಿಮ ಎಸೆತದಲ್ಲಿ ಘಟನೆ ನಡೆದಿದ್ದು, ಆರ್ಚರ್ ಅವರ ಬೌನ್ಸರ್ ನೇರ ಅಲೆಕ್ಸ್ ರ್ ಮುಖಕ್ಕೆ ಬಡಿದ ಪರಿಣಾಮ ಅವರ ಹೆಲ್ಮೆಟ್ ಕೂಡ ಕಳಚಿ ಬಂದಿತ್ತು. ತಕ್ಷಣ ಕ್ಯಾರಿ ತಮ್ಮ ಹೆಲ್ಮೆಟನ್ನು ಹಿಡಿದರು. ಈ ಸಂದರ್ಭದಲ್ಲಿ ಕ್ಯಾರಿ ಅವರ ಗಲ್ಲದಿಂದ ರಕ್ತ ಸೋರುತ್ತಿತ್ತು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಆಟಗಾರರಲ್ಲಿ ಆತಂಕ ಮನೆ ಮಾಡಿತ್ತು.

ಇಷ್ಟು ಗಾಯವಾದರೂ ಕ್ಯಾರಿ ಮೈದಾನ ಬಿಟ್ಟು ಕದಲಲಿಲ್ಲ. ಮತ್ತೆ ಬ್ಯಾಟಿಂಗ್ ಮುಂದುವರಿಸಿದರು. ಗಾಯವಾದಾಗ ಕೇವಲ 4 ರನ್ ಗಳಿಸಿದ್ದ ಕ್ಯಾರಿ 47 ರನ್ ಗಳಿಸಿ ಔಟಾದರು. ಕ್ಯಾರಿ ಕ್ರೀಡಾ ಸ್ಪೂರ್ತಿಗೆ ವಿಶ್ವದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top