fbpx
ಸಮಾಚಾರ

“ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ” ಬೇಸರ ವ್ಯಕ್ತಪಡಿಸಿದ ರೋಹಿತ್ ಶರ್ಮಾ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭಾರತದ ಚಾಂಪಿಯನ್ ಆಲ್‌ರೌಂಡರ್ ಆಟಗಾರ ಯುವರಾಜ್ ಸಿಂಗ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ ಎಂದು ಆರಂಭಿಕ ಆಟಗಾರ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

 

 

ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಲು ವಿಫಲವಾಗಿರುವ ಯುವಿಗೆ ವಿದಾಯದ ಪಂದ್ಯ ನಿರಾಕರಿಸ್ಪಟ್ಟಿದೆ. ಇದನ್ನೇ ಉಲ್ಲೇಖಿಸಿರುವ ರೋಹಿತ್ ಶರ್ಮಾ, ಯುವಿ ಇದಕ್ಕೂ ಉತ್ತಮ ವಿದಾಯಕ್ಕೆ ಅರ್ಹವಾಗಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಹಿತ್ ಶರ್ಮಾ, “ಯುವಿ ಇದಕ್ಕೂ ಉತ್ತಮ ವಿದಾಯಕ್ಕೆ ಅರ್ಹವಾಗಿದ್ದಾರೆ” ಎಂದಿದ್ದಾರೆ.

ಒಂದು ವೇಳೆ ಯೋ-ಯೋ ಟೆಸ್ಟ್ ಪಾಸ್ ಮಾಡದಿದ್ದರೆ, ಒಂದು ವಿದಾಯದ ಪಂದ್ಯ ಆಯೋಜಿಸುವುದಾಗಿ ಯುವಿಗೆ ಬಿಸಿಸಿಐ ತಿಳಿಸಿತ್ತಂತೆ. ಆಗ ಯುವಿ, ಒಂದು ವೇಳೆ ನಾನು ಯೋ-ಯೋ ಟೆಸ್ಟ್ ಫೇಲಾದರೆ ಮನೆಗೆ ಹೋಗುತ್ತೇನೆ ಹೊರತು, ವಿದಾಯದ ಪಂದ್ಯ ಆಡುವುದಿಲ್ಲ ಎಂದಿದ್ದರಂತೆ. ವಿಪರ್ಯಾಸವೆಂದರೆ ಯುವಿ ಯೋ-ಯೋ ಟೆಸ್ಟ್ ಪಾಸ್ ಮಾಡಿದರು ತಂಡದಲ್ಲಿ ಸ್ಥಾನ ಸಿಗಲಿಲ್ಲ ಎನ್ನುವುದು ಕಟು ಸತ್ಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top