fbpx
ಸಮಾಚಾರ

ಝಂಪಾ ಮೇಲೆ ಚೆಂಡು ವಿರೂಪ ಆರೋಪ- ನಾಯಕ ಫಿಂಚ್ ಹೇಳಿದ್ದೇನು?

ವಿಶ್ವಕಪ್ 2019ರ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಭಾರತ 36 ರನ್ ಗಳಿಂದ ಪಂದ್ಯ ಗೆದ್ದರೂ ಆಸೀಸ್ ಬೌಲರ್ ಮೇಲೆ ಚೆಂಡು ವಿರೂಪಗೊಳಿಸಿದ ಆರೋಪ ಕೇಳಿ ಬಂದಿದೆ. ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಆ್ಯಡಂ ಜಂಪಾ ಅವರು ಬೌಲ್ ಮಾಡುವ ಸಮಯದಲ್ಲಿ ತೋರಿದ ನಡೆಯಿಂದ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಚೆಂಡು ವಿರೂಪಗೊಳಿಸಿದ ಆರೋಪ ಮಾಡುತ್ತಿದ್ದಾರೆ.

 

 

ಝಂಪಾ ಪ್ರತಿ ಎಸೆತಕ್ಕೂ ಮುನ್ನ ಜೇಬಿನೊಳಗಿಂದ ವಸ್ತು ತೆಗೆದು ಬಾಲ್ ಮೇಲೆ ಹಚ್ಚಿದಂತೆ ಇರೋ ವೀಡಿಯೋ ವೈರಲ್ ಆಗಿತ್ತು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ನಾಯಕ ಆರೋನ್ ಫಿಂಚ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

‘ಸ್ಪಿನ್ನರ್ ಝಂಪಾ ಕೈ ಬಿಸಿ ಮಾಡುವ ಸಾಧನವನ್ನು ಪ್ರತಿ ಪಂದ್ಯಕ್ಕೂ ಇಟ್ಟುಕೊಂಡಿರುತ್ತಾರೆ. ನೀರಿನಿಂದ ಬಾಲ್ ಒದ್ದೆಯಾದಾಗ ಸ್ಪಿನ್ ಪರಿಣಾಮಕಾರಿಯಾಗಿರುವುದಿಲ್ಲ. ಹೀಗಾಗಿ ಝಂಪಾ ಹ್ಯಾಂಡ್ ವಾರ್ಮರ್‌ನಿಂದ ಕೈ ಬಿಸಿ ಮಾಡಿ ಬೌಲಿಂಗ್ ಮಾಡುತ್ತಾರೆ. ಇದು ಬಾಲ್ ಟ್ಯಾಂಪರಿಂಗ್ ಅಲ್ಲ. ಆ ಫೋಟೋವನ್ನು ನಾನೂ ನೋಡಿದೆ. ಆದರೆ ನನಗೆ ಗೊತ್ತಿದ್ದಹಾಗೆ ಝಂಪಾ ಕೈಲಿದ್ದಿದು ಹ್ಯಾಂಡ್‌ವಾರ್ಮರ್. ಆತ ಹ್ಯಾಂಡ್ ವಾರ್ಮರನ್ನು ಏಲ್ಲಾ ಪಂದ್ಯಗಳಲ್ಲೂ ಬಳಸಿಕೊಳ್ಳುತ್ತಾನೆ” ಎಂದು ಫಿಂಚ್ ಹೇಳಿದ್ದಾರೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top