fbpx
ಸಮಾಚಾರ

ಅಮಿತಾಭ್ ಬಚ್ಚನ್ ಟ್ವಿಟ್ಟರ್ ಖಾತೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಫೋಟೋ.

ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಹ್ಯಾಕರ್‌ಗಳು ಅಮಿತಾಭ್ ಪ್ರೊಫೈಲ್ ಫೋಟೋ ಜಾಗದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಹಾಕಿದ್ದಾರೆ. ಹಾಗೆಯೇ ಅಮಿತಾಭ್ ಬಯೋಡೇಟಾವನ್ನೂ ಬದಲಾಯಿಸಿದ್ದಾರೆ. ಪ್ರೊಫೈಲ್‌ ಮಾಹಿತಿ ವಿಭಾಗದಲ್ಲಿ ‘ನಟ… ಉತ್ತಮ ಎಂದು ಈಗಲೂ ಕೆಲವರು ಹೇಳುತ್ತಿದ್ದಾರೆ. ಲವ್‌ ಪಾಕಿಸ್ತಾನ್‌,’ ಎಂದು ಬದಲಾಯಿಸಿದ್ದಾರೆ.

 

 

 

ಆಯಿಲ್ದಿಜ್​ ಟಿಮ್​ ಟರ್ಕೀಶ್ ಸೈಬರ್ ಆರ್ಮಿ ಈ ಹ್ಯಾಕ್​ನ ಹಿಂದಿರುವ ತಂಡ. ಹ್ಯಾಕ್​ ಮಾಡಿದ ನಂತರ ಈ ಖಾತೆಯಿಂದ ಒಂದೆರಡು ಟ್ವೀಟ್​ ಕೂಡ ಮಾಡಲಾಗಿದೆ. “ಇಡೀ ವಿಶ್ವಕ್ಕೆ ಇದೊಂದು ಪ್ರಮುಖ ಸಂದೇಶ. ಟರ್ಕಿಯ ಫುಟ್​ಬಾಲರ್​ಗಳ ವಿರುದ್ಧ ಐಸ್​ಲ್ಯಾಂಡ್​ ಗಣರಾಜ್ಯ ನಡೆದುಕೊಂಡ ರೀತಿಯನ್ನು ಖಂಡಿಸುತ್ತೇವೆ. ನಾವು ತುಂಬಾ ಮೃದುವಾಗಿ ಮಾತನಾಡುತ್ತೇವೆ. ಆದರೆ, ದೊಡ್ಡ ಸೈಬರ್​ ದಾಳಿ ನಡೆಸುವ ಎಚ್ಚರಿಕೆ ನೀಡುತ್ತಿದ್ದೇವೆ,” ಎಂದಿದ್ದಾರೆ ಹ್ಯಾಕರ್ಸ್​.

ನಂತರದ ಟ್ವೀಟ್‌ನಲ್ಲಿ ಭಾರತದ ಕುರಿತು ಬರೆಯಲಾಗಿತ್ತು. ಭಾರತದಲ್ಲಿ ಮುಸ್ಲೀಮರ ಮೇಲೆ ದಾಳಿ ನಡೆಯುತ್ತಿದೆ ಎಂದು ಅದರಲ್ಲಿ ಹೇಳಲಾಗಿದೆ. ‘ರಂಜಾನ್‌ ಮಾಸಾಚರಣೆಯಲ್ಲಿ ಭಾರತದಲ್ಲಿ ನಿರ್ಧಯವಾಗಿ ಮುಸ್ಲೀಮರ ಮೇಲೆ ದಾಳಿ ನಡೆದಿದೆ. ಇದು ಈ ದಿನಗಳಲ್ಲಿ ಮೊಹಮ್ಮದ್ದನ ಸಮುದಾಯದ ಮೇಲೆ ನಡೆದ ದಾಳಿ. ಭಾರತದಲ್ಲಿನ ಮುಸ್ಲೀಮರನ್ನು ಅಬ್ದುಲ್ಹಾಮ್ಮದ್‌ ನಮಗೆ ಒಪ್ಪಿಸಿದ್ದಾರೆ,’ ಎಂದು ಅದರಲ್ಲಿ ಬರೆಯಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top