fbpx
ಸಮಾಚಾರ

ಸ್ಮಿತ್‌ಗೆ ‘ಚೀಟರ್’ ಎಂದು ಕೂಗುತ್ತಿದ್ದ ಭಾರತೀಯ ಫ್ಯಾನ್ಸ್‌ಗೆ ಮೈದಾನದಲ್ಲೇ ವಿರಾಟ್ ಕ್ಲಾಸ್- ಕೊಹ್ಲಿ ನಡೆಗೆ ಭಾರಿ ಮೆಚ್ಚುಗೆ.

ಭಾನುವಾರ ನಡೆದ ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಪಡೆ ಗೆದ್ದು ಬೀಗಿದೆ. ಈ ಮೂಲಕ ವಿಶ್ವಕಪ್​ನಲ್ಲಿ ಸತತ ಎರಡನೇ ಜಯ ದಾಖಲಿಸಿದೆ. ವಿರಾಟ್​ ನಾಯಕತ್ವಕ್ಕೆ ಮೆಚ್ಚುಗೆಗಳು ಕೇಳಿ ಬಂದಿವೆ. ಪಂದ್ಯ ನಡೆಯುವಾಗ ವಿರಾಟ್​ ನಡೆದುಕೊಂಡ ರೀತಿ ಅಭಿಮಾನಿಗಳಿಗೆ ಇಷ್ಟವಾಗಿದೆ. ಅವರು ಈಗ ಸೋಷಿಯಲ್​ ಮೀಡಿಯಾದಲ್ಲಿ ನಿಜಕ್ಕೂ ಹೀರೋ ಆಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನ್ನು ವಿರಾಟ್ ಅಭಿಮಾನಿಗಳು ಸ್ಮಿತ್ ಅವರನ್ನು ಹಾಸ್ಯ ಮಾಡುತ್ತಿದ್ದರು. ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಅರವನ್ನು ವೇಳೆ ಪ್ರೇಕ್ಷಕರು ಸ್ಮಿತ್ ಅಣಕಿಸೋ ರೀತಿಯಲ್ಲಿ ‘ಚೀಟರ್ ಚೀಟರ್’ ಕೂಗಿದ್ದಾರೆ. ಈ ವೇಳೆ ಕ್ರಿಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಪ್ರೇಕ್ಷಕರತ್ತ ಕೈಬೀಸಿ, ಸ್ಮಿತ್‌ಗೆ ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿ. ಆದರೆ ಅಣಕಿಸಬೇಡಿ ಎಂದು ಕೈ ಸನ್ನೆ ಮಾಡಿದ್ದಾರೆ. ಇಷ್ಟೇ ಅಲ್ಲ ಪ್ರೇಕ್ಷಕರ ವರ್ತನೆಗೆ ಕೊಹ್ಲಿ ಗರಂ ಆಗಿದ್ದಾರೆ.

ವಿರಾಟ್ ಕೊಹ್ಲಿ ಕ್ರೀಡಾಸ್ಫೂರ್ತಿಯನ್ನು ಗಮನಿಸಿದ ಸ್ಟೀವ್ ಸ್ಮಿತ್ ಹಸ್ತಲಾಘವ ಮಾಡುವ ಮೂಲಕ ಧನ್ಯವಾದ ಅರ್ಪಿಸಿದರು. ಪ್ರಸ್ತುತ ವಿರಟ್ ಕೊಹ್ಲಿ ಮೆರಿದಿರುವ ಕ್ರೀಡಾಸ್ಫೂರ್ತಿಗೆ ವ್ಯಾಪಕ ಮನ್ನಣೆ ದೊರಕುತ್ತಿದೆ.

 

 

 

ಅಂದಹಾಗೆ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಒಂದು ವರ್ಷದ ನಿಷೇಧವನ್ನು ಶಿಕ್ಷೆಯನ್ನು ಎದುರಿಸಿರುವ ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಈಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು. ಆಸ್ಟ್ರೇಲಿಯಾದ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡಿರುವ ಸ್ಮಿತ್ ಹಾಗೂ ವಾರ್ನರ್‌ ಕಮ್‌ಬ್ಯಾಕ್ ನಿರೀಕ್ಷಿಸಿದಷ್ಟು ಸಿಹಿಯಾಗಿರಲಿಲ್ಲ. ಅಭ್ಯಾಸ ಪಂದ್ಯದ ವೇಳೆಯಲ್ಲೇ ಇಂಗ್ಲೆಂಡ್ ಅಭಿಮಾನಿಗಳು ಮೋಸಗಾರ ಎಂದು ಜರೆದದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top