fbpx
ಸಮಾಚಾರ

ಧೋನಿ ಗ್ಲೋವ್ಸ್ ಆಯ್ತು ಇದೀಗ ಗೇಲ್ ಬ್ಯಾಟ್‌ಗೆ ಒಲ್ಲೆಯೆಂದ ಐಸಿಸಿ.

ಎಂ.ಎಸ್.ಧೋನಿ ಕೀಪಿಂಗ್ ಗ್ಲೌಸ್ ಕಳೆದ ಎರಡು ದಿನಗಳಿಂದ ಭಾರಿ ಸದ್ದು ಮಾಡಿತ್ತು. ದಕ್ಷಿಣ ಆಫ್ರಿಕಾ ಎದುರು ಭಾರತ ಆಡಿದ್ದ ಮೊದಲ ಪಂದ್ಯದಲ್ಲಿ ಧೋನಿ ಗ್ಲೌಸ್‌ನಲ್ಲಿ ಭಾರತಿಯ ಸೇನೆಯ ಬಲಿದಾನದ ಚಿಹ್ನೆ ಬಳಸಿದ್ದರು. ಈ ಮೂಲಕ ಸೇನೆಗೆ ಗೌರವ ಸೂಚಿಸಿದ್ದರು. ಆದರೆ ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇಷ್ಟೇ ಅಲ್ಲ ಚಿಹ್ನೆ ತೆಗೆಯಲು ಸೂಚಿಸಿತ್ತು. ಹಾಗಾಗಿ ನೆನ್ನೆಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ ಸೇನಾ ಚಿಹ್ನೆ ಇಲ್ಲದ ಗ್ಲೌಸ್ ಬಳಸಿದ್ದಾರೆ.

 

 

ಧೋನಿ ಅವರು ಬಲಿದಾನ ಗ್ಲೋವ್ಸ್ ತೊಡುವುದಕ್ಕೆ ಒಪ್ಪಿಗೆ ನಿರಾಕರಿಸಿದ ನಂತರ ಐಸಿಸಿ ಕ್ರಿಸ್‌ಗೇಲ್ ಅವರ ಇಂಥದ್ದೇ ಕೋರಿಕೆಯನ್ನೂ ನಿರಾಕರಿಸಿದೆ. ಸ್ಫೋಟಕ ಬ್ಯಾಟಿಂಗ್‌ಗೆ ಖ್ಯಾತಿಯಾಗಿರುವ ವೆಸ್ಟ್‌ ಇಂಡೀಸ್ ದೈತ್ಯ ಕ್ರಿಸ್‌ಗೇಲ್‌ಗೆ ‘ಯೂನಿವರ್ಸ್ ಬಾಸ್’ ಎಂದೇ ಖ್ಯತೆಯಾಗಿದ್ದಾರೆ.. ಹೀಗಾಗಿ ತಾವು ವಿಶ್ವಕಪ್ ಪಂದ್ಯದ ವೇಳೆ ಬ್ಯಾಟ್‌ನಲ್ಲಿ ‘ಯೂನಿವರ್ಸ್ ಬಾಸ್’ ಸ್ಟಿಕರ್ ಅಂಟಿಸಿದ ಬ್ಯಾಟ್ ನಲ್ಲಿ ಆಡಲು ಅನುಮತಿ ನೀಡಬೇಕೆಂದು ಗೇಲ್, ಐಸಿಸಿಯನ್ನು ಮನವಿ ಮಾಡಿಕೊಂಡಿದ್ದರು.

ಆದ್ರೆ, ಗೇಲ್​ ಮನವಿ ತಿರಸ್ಕರಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​, ಪಂದ್ಯದ ವೇಳೆ ಯಾವುದೇ ವೈಯಕ್ತಿಕ ವಸ್ತುಗಳನ್ನ ಬಳಸಬಾರದೆಂದು ಹೇಳಿದೆ. ಅಲ್ಲದೇ, ಬಟ್ಟೆಯ ಮೇಲಾಗಲಿ ಅಥವಾ ಕ್ರೀಡಾ ಸಲಕರಣೆಗಳ ಮೇಲೆ ಯಾವುದೇ ವೈಯಕ್ತಿಕ ಸಂದೇಶ ತೋರ್ಪಡಿಸಲು ಅವಕಾಶವಿಲ್ಲ. ಹಾಗೆ ಮಾಡಿದರೆ ಕೌನ್ಸಿಲ್​ನ ನಿಯಮಗಳನ್ನ ಉಲ್ಲಂಘಿಸದಂತಾಗುತ್ತದೆ ಎಂಬ ಪಾಠ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top