fbpx
ಸಮಾಚಾರ

ವಿಶ್ವಕಪ್ 2019- ಫಿಟ್ ಇದ್ರೂ ತಂಡದಿಂದ ಹೊರದಬ್ಬಿದರು” ಅಳಲು ತೋಡಿಕೊಂಡ ಆಫ್ಗನ್ ಸ್ಟಾರ್ ಆಟಗಾರ.

ಹಿರಿಯ ಅನುಭವಿ ವಿಕೆಟ್ ಕೀಪರ್ ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ಶಹಜಾದ್ ಆಫ್ಗನ್ ಕ್ರಿಕೆಟ್ ತಂಡದಿಂದ ಕೈಬಿಡಲಾಗಿತ್ತು.. ಮೊಣಕಾಲಿನ ಗಾಯದ ಸಮಸ್ಯೆಗೊಳಾಗಿರುವ 32ರ ಹರೆಯ ಶಹಜಾದ್ ವಿಶ್ವಕಪ್ ನಿಂದ ಹೊರ ಬಿದ್ದಿದ್ದಾರೆ ಎಂದು ಆಫ್ಘಾನಿಸ್ತಾನ್ ಟೀಮ್ ಮ್ಯಾನೇಜ್ ಮೆಂಟ್ ತಿಳಿಸಿತ್ತು. ಆದರೆ ಅಫ್ಘಾನಿಸ್ತಾನ ಮಂಡಳಿ ಷಡ್ಯಂತ್ರ ಮಾಡಿ ನನ್ನನ್ನು ವಿಶ್ವಕಪ್ ಟೂರ್ನಿಯಿಂದ ಹೊರದಬ್ಬಿದ್ದಾರೆ ಎಂದು ಮೊಹಮ್ಮದ್ ಶೆಹಝಾದ್ ಅಳಲು ತೋಡಿಕೊಂಡಿದ್ದಾರೆ.

 

 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯೂಜಿಲೆಂಡ್​ ವಿರುದ್ಧದ ಪಂದ್ಯಕ್ಕಾಗಿ ಅಭ್ಯಾಸ ನಡೆಸಿ ಹೋಟೆಲ್​ಗೆ ಮರಳುವಾಗ ನನ್ನ ಮೊಬೈಲ್​ ಫೋನ್​ ಅನ್ನು ನೋಡಿದೆ. ಅದರಲ್ಲಿ ನನ್ನನ್ನು ವಾಪಸು ಕರೆಯಿಸಿಕೊಳ್ಳುತ್ತಿರುವುದಾಗಿ ಎಸಿಬಿಯಿಂದ ಬಂದಿದ್ದ ಸಂದೇಶ ಕಾಣಿಸಿತು. ನಾನು ಸೇರಿ ತಂಡದ ಬೇರಾವುದೇ ಆಟಗಾರರಿಗೂ ಈ ವಿಷಯ ತಿಳಿದಿರಲಿಲ್ಲ. ವಿಷಯ ಗೊತ್ತಾದ ಬಳಿಕ ನನ್ನಂತೆ ಅವರು ಕೂಡ ಅಚ್ಚರಿಗೊಂಡರು

“ನಾನು ಕ್ರಿಕೆಟ್ ಆಡಲು ಸಂಪೂರ್ಣ ಫಿಟ್ ಇದ್ದೆ. ಆದರೆ ಅಫ್ಘಾನ್ ಕ್ರಿಕೆಟ್ ಮಂಡಳಿಯಲ್ಲಿನ ಕೆಲವರು ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ನಾನು ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೆ ಸಕಲ ಅಭ್ಯಾಸ ಕೂಡ ನಡೆಸಿದ್ದ. ಆದರೆ ಮಂಡಳಿ ದಿಢೀರ್ ಪ್ರಕಟಣೆ ನನಗೆ ಆಘಾತ ತಂದಿತ್ತು. ಕೋಚ್ ಫಿಲ್ ಸಿಮೋನ್ಸ್‌ಗೂ ಕೂಡ ಮಂಡಳಿ ನಿರ್ಧಾರದ ಕುರಿತು ತಿಳಿದಿರಲಿಲ್ಲ ಎಂದು ಶಹಜಾದ್ ಅಳಲು ತೋಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top