fbpx
ಸಮಾಚಾರ

ಭಾರತದ ವಿರುದ್ಧ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದರೆ ಜಂಪಾ? ಮತ್ತೊಬ್ಬ ಆಸೀಸ್ ಆಟಗಾರನ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ.

ವಿಶ್ವಕಪ್ 2019ರ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಭಾರತ 36 ರನ್ ಗಳಿಂದ ಪಂದ್ಯ ಗೆದ್ದರೂ ಆಸೀಸ್ ಬೌಲರ್ ಮೇಲೆ ಚೆಂಡು ವಿರೂಪಗೊಳಿಸಿದ ಆರೋಪ ಕೇಳಿ ಬಂದಿದೆ. ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಆ್ಯಡಂ ಜಂಪಾ ಅವರು ಬೌಲ್ ಮಾಡುವ ಸಮಯದಲ್ಲಿ ತೋರಿದ ನಡೆಯಿಂದ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಚೆಂಡು ವಿರೂಪಗೊಳಿಸಿದ ಆರೋಪ ಮಾಡುತ್ತಿದ್ದಾರೆ.

 

 

 

ಭಾರತದ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಜಂಪಾ ಬೌಲಿಂಗ್ ಮಾಡುತ್ತಿದ್ದರು. ಆದರೆ ಪದೇ ಪದೇ ತಮ್ಮ ಪ್ಯಾಂಟ್‌ ಜೇಬಿನಲ್ಲಿ ಕೈಹಾಕಿ ತೆಗೆದು ಚೆಂಡನ್ನು ರಬ್ ಮಾಡುತ್ತಿದ್ದರು. ಈ ನಡೆಯನ್ನು ಟಿವಿಯಲ್ಲಿ ತೋರಿಸಿದ್ದನ್ನು ಗುರುತಿಸಿದ ಹಲವು ಕ್ರಿಕೆಟ್ ಪ್ರಿಯರು ಜಂಪಾ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದಾರೆ.

ಟ್ವೀಟಿಗರು ಆರೋಪಿಸಿರುವಂತೆ ಜಂಪಾರ ಈ ಶಂಕಾಸ್ಪದ ನಡವಳಿಕೆ ಬಳಿಕ ಚೆಂಡು ಸತತ 2 ಓವರ್ ಪುಟಿಯುತ್ತಿತ್ತು. ಅಲ್ಲದೆ ಅಲ್ಲಿಯವರೆಗೂ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಧವನ್ ಗೂ ಕೂಡ ದೊಡ್ಡ ಹೊಡೆತಗಳನ್ನು ಗಳಿಸಲು ಕಷ್ಟವಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ಅಂದಹಾಗೆ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಂದು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಆಸಿಸ್ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಡೇವಿಡಾ ವಾರ್ನರ್ ವರ್ಷದ ಬಳಿಕ ಮತ್ತೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇಂತಹ ಹೊತ್ತಲ್ಲಿ ಮತ್ತೆ ಚೆಂಡು ವಿರೂಪಗೊಳಿಸಿದ ಆರೋಪ ಕೇಳಿಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top