fbpx
ಸಮಾಚಾರ

ನೆನ್ನೆಯ ಪಂದ್ಯದಲ್ಲಿ ಧೋನಿ ಗ್ಲೌಸ್ ಮೇಲಿತ್ತಾ ಬಲಿದಾನ ಗುರುತು?

ಎಂ.ಎಸ್.ಧೋನಿ ಕೀಪಿಂಗ್ ಗ್ಲೌಸ್ ಕಳೆದ ಎರಡು ದಿನಗಳಿಂದ ಭಾರಿ ಸದ್ದು ಮಾಡಿತ್ತು. ದಕ್ಷಿಣ ಆಫ್ರಿಕಾ ಎದುರು ಭಾರತ ಆಡಿದ್ದ ಮೊದಲ ಪಂದ್ಯದಲ್ಲಿ ಧೋನಿ ಗ್ಲೌಸ್‌ನಲ್ಲಿ ಭಾರತಿಯ ಸೇನೆಯ ಬಲಿದಾನದ ಚಿಹ್ನೆ ಬಳಸಿದ್ದರು. ಈ ಮೂಲಕ ಸೇನೆಗೆ ಗೌರವ ಸೂಚಿಸಿದ್ದರು. ಆದರೆ ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇಷ್ಟೇ ಅಲ್ಲ ಚಿಹ್ನೆ ತೆಗೆಯಲು ಸೂಚಿಸಿತ್ತು. ಹಾಗಾಗಿ ನೆನ್ನೆಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ ಸೇನಾ ಚಿಹ್ನೆ ಇಲ್ಲದ ಗ್ಲೌಸ್ ಬಳಸಿದ್ದಾರೆ.

ಬಲಿದಾನ ಇಲ್ಲದ ಗ್ಲೋವ್ಸ್:
ಬಿಸಿಸಿಐ ಬಲಿದಾನ ಚಿಹ್ನೆಗೆ ಅನುಮತಿ ನೀಡಲು ಐಸಿಸಿಗೆ ಪತ್ರ ಬರೆದು ಮನವಿ ಮಾಡಿತ್ತು. ಆದರೆ ಬಿಸಿಸಿಐ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಮನವಿ ತಿರಸ್ಕರಿಸಿದ ಕಾರಣ ಧೋನಿ, ಮತ್ಮ ಬಲಿದಾನ ಚಿಹ್ನೆ ಇಲ್ಲದ ಗ್ಲೌಸ್ ಬಳಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧೋನಿ ಗ್ಲೌಸ್ ಮೇಲೆ ಎಲ್ಲರ ಚಿತ್ತ ನೆಟ್ಟಿತು.

 

 

ಏನಿದು ವಿವಾದ?
ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಧೋನಿ ಬಲಿದಾನ್ ಲೋಗೋ ಇರುವ ಗ್ಲೋವ್ ತೊಟ್ಟು ವಿಕೆಟ್ ಕೀಪಿಂಗ್ ಮಾಡಿದ್ದರು. ಇದನ್ನು ಗಮನಿಸಿದ ಐಸಿಸಿ ನಿನ್ನೆಯಷ್ಟೆ ತಮ್ಮ ಗ್ಲೌಸ್‌ನಿಂದ ಸೇನಾ ಲಾಂಛನವನ್ನು ತೆಗೆಯುವಂತೆ ಧೋನಿಗೆ ಸೂಚಿಸಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಮನವಿ ಮಾಡಿದೆ. ಆದರೆ ಧೋನಿ ಬೆನ್ನಿಗೆ ನಿಂತ ಬಿಸಿಸಿಐ, ಧೋನಿ ಧರಿಸಿರುವ ಸೇನಾ ಲಾಂಛನವು ಧಾರ್ಮಿಕ ಅಥವಾ ವಾಣಿಜ್ಯಕ್ಕೆ ಸಂಬಂಧಪಟ್ಟಿದ್ದಲ್ಲ ಎಂದು ಹೇಳಿ ಗ್ಲೋವ್ಸ್ ಧರಿಸಲು ವಿಶೇಷ ಮನವಿ ಮಾಡಿಕೊಂಡಿತ್ತು. ಆದರೆ ಮನವಿಯನ್ನು ತಿರಸ್ಕರಿಸಿರುವ ಐಸಿಸಿ “ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಜಾಹೀರಾತು ಲೋಗೊ ಹೊಂದಿರಬಹುದು. ಧೋನಿ ಈಗಾಗಲೇ ಎಸ್‌ಜಿ ಲೋಗೊವನ್ನು ಹೊಂದಿದ್ದಾರೆ. ಹೀಗಾಗಿ ಇದು ನಿಯಮದ ಉಲ್ಲಂಘನೆಯಾಗುತ್ತದೆ” ಎಂದು ಐಸಿಸಿ ಹೇಳಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top