fbpx
ಸಮಾಚಾರ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ #WeNeedEmergencyHospitalInKodagu ಟ್ವಿಟ್ಟರ್ ಆಂದೋಲನ.

ಕೊಡಗು ಜಿಲ್ಲೆಗೆ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿದೆ. ಕೊಡಗಿನಲ್ಲಿ ಏನಾದರೂ ಹೆಚ್ಚಿನ ಚಿಕಿತ್ಸೆ ಬೇಕಾದರೆ ಇಲ್ಲಿನ ಜನತೆ ದೂರದ ಮೈಸೂರು, ಬೆಂಗಳೂರು​ ಅಥವಾ ಮಂಗಳೂರಿಗೆ ತೆರಳಬೇಕು. ಹೀಗಾಗಿ ಒಂದು ಸುಸಜ್ಜಿತ ಆಸ್ಪತ್ರೆ ಬೇಕು ಎಂಬುದು ಬಹು ವರ್ಷಗಳ ಬೇಡಿಕೆ. ಈಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಈ ಕೂಡಲೇ ಆಗಲಿ. ಯಾವುದೇ ಕಾರಣಕ್ಕೂ ಅದು ವಿಳಂಬವಾಗಬಾರದು. ಅಲ್ಲಿ ಸಂಭವಿಸುತ್ತಿರುವ ಅನೇಕ ಅಪಘಾತಗಳು ನಿಲ್ಲಲಿ. ಅನೇಕ ಜನರ ಪ್ರಾಣ ಉಳಿಸುವ ಪುಣ್ಯ ಕಟ್ಕೊಳ್ಳಿ. ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬ ಪ್ರಜೆಯ ಆರೋಗ್ಯವೂ ಕೂಡ ಮುಖ್ಯ ಎಂದು ಟ್ವಿಟ್ಟಿಗರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತಿದ್ದಾರೆ..

 

 

ಅಂದಹಾಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕನ್ನಡಕ್ಕೆ ತುರ್ತು ಆಸ್ಪತ್ರೆ ಬೇಕು ಎಂದು ಆಗ್ರಹಿಸಿ ಆಂದೋಲನ ನಡೆಸಿದ್ದರು. ಈ ಆಂದೋಲನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಟ್ವಿಟ್ಟರ್ ನಲ್ಲಿಯೇ “ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆಯ ಅಗತ್ಯಕ್ಕಾಗಿ ಅಭಿಯಾನ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ವರದಿ ತರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.” ಎಂದು ಉತ್ತರಿಸಿದ್ದರು. ಯಾವಾಗ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದರೋ ಇದರಿಂದ ಪ್ರೇತರಾಗಿರುವ ಕೊಡಗಿನ ಜನತೆ ಕೂಡ ಕೊಡಗಿನಲ್ಲೂ ಈ ಸಮಸ್ಯೆ ಇದೆ ಇಲ್ಲೂ ಬಗೆಹರಿಸಿ ಎಂದು ಟ್ರೆಂಡ್ ಮಾಡುತ್ತಿದ್ದಾರೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top