fbpx
ಸಮಾಚಾರ

ಮಂಡ್ಯದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಮುಂದಿನ ಚಿತ್ರಕ್ಕೆ ತೆಲುಗಿನ ಲೆಜೆಂಡರಿ ಡೈರೆಕ್ಟರ್ ನಿರ್ದೇಶನ.

ಮಂಡ್ಯದಲ್ಲಿನ ಸೋಲಿನ ನಂತರ ಪರಾಜಿತ ಅಭ್ಯರ್ಥಿ ನಿಖಿಲ್‌ ಕುಮಾರ್‌ ಏನು ಮಾಡುತ್ತಿದ್ದಾರೆ, ಸಿನಿಮಾ ರಂಗದಲ್ಲಿ ಇರುತ್ತಾರೋ, ಇಲ್ಲವೋ ಅಥವಾ ಪೂರ್ಣ ಪ್ರಮಾಣದಲ್ಲಿ ರಾಜಕಾರಣಿ ಆಗುತ್ತಾರೋ ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದ್ದವು. ಈ ಬಗ್ಗೆ ಸ್ವತಃ ನಿಖಿಲ್‌ ಅವರೇ ಖಾಸಗಿ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

“ನಾನು ಚಿತ್ರರಂಗಕ್ಕೆ ಬಂದಿದ್ದು ಪ್ಯಾಷನ್‌ಗಾಗಿ. ರಾಜಕಾರಣ ಎಂಬುದು ಜವಾಬ್ದಾರಿ. ಪ್ಯಾಷನ್‌ ಅನ್ನು ಮುಂದುವರಿಸಿಕೊಂಡು, ಜವಾಬ್ದಾರಿಯನ್ನು ಹೊತ್ತುಕೊಂಡು ಮುಂದುವರಿಯುತ್ತೇನೆ. ” ಎಂದು ನಿಖಿಲ್ ಹೇಳಿದ್ದಾರೆ.. ಹಾಗಾದರೆ ನಿಖಿಲ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆಯೇ? ಮುಂದೆ ಓದಿ.

“ಎಲೆಕ್ಷನ್ ಗೆ ಮುಂಚೆ ಜಯಣ್ಣ ಸಿನಿಮಾ ಮಾತುಕತೆ ಆಗಿದೆ. ಈಗ ಎಲೆಕ್ಷನ್ ಬಳಿ ಆ ಬಗ್ಗೆ ಮತ್ತೆ ಮಾತಾಡಿಲ್ಲ. ಲೈಕಾ ಪ್ರೊಡಕ್ಷನ್ ಜೊತೆ ಸಿನಿಮಾ ಮಾಡೋದು ಪಕ್ಕಾ. ಅಂತಹ ದೊಡ್ಡ ಬ್ಯಾನರ್ ಜೊತೆ ಚಿತ್ರ ಮಾಡುವುದು ಖುಷಿ. ಇನ್ನೊಂದು ವಾರದಲ್ಲಿ ಎಲ್ಲವೂ ಫೈನಲ್ ಆಗುತ್ತೆ” ಎಂದು ನಿಖಿಲ್ ಹೇಳಿದ್ದಾರೆ.

ತೆಲುಗು ಲೆಜೆಂಡರಿ ನಿರ್ದೇಶಕ:
ನಿಖಿಲ್ ಮುಂದಿನ ಚಿತ್ರಕ್ಕೆ ತೆಲುಗು ಚಿತ್ರರಂಗದ ದೊಡ್ಡ ನಿರ್ದೇಶಕನೊಬ್ಬ ನಿರ್ದೇಶನ ಮಾಡುವುದು ಪಕ್ಕಾ ಆಗಿದೆಯಂತೆ. ಸೋಷಿಯಲ್‌ ರೆಸ್ಪಾನ್ಸಿಬಲಿಟಿ ಮತ್ತು ಸಂದೇಶ ಇರುವ ಸಿನಿಮಾ ಮಾಡುವ ಇಂಗಿತವನ್ನು ನಿಖಿಲ್ ವ್ಯಕ್ತಪಡಿಸಿದ್ದಾರಂತೆ. ಆದರೆ ಚಿತ್ರಕ್ಕೆ ಕಥೆ ಇನ್ನೂ ಫೈನಲ್ ಆಗಿಲ್ಲ, ಕಥೆಯನ್ನು ನಿರ್ದೇಶಕರೇ ಆಯ್ಕೆ ಮಾಡುತ್ತಾರೆ ಎನ್ನುತ್ತಾರೆ ನಿಖಿಲ್ ಕುಮಾರ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top